ದೇವರಿಗೂ ಬಣ್ಣಕ್ಕೂ ಸಂಬಂಧವಿದೆ. ಪ್ರತಿಯೊಂದು ದೇವರಿಗೂ ಒಂದೊಂದು ಬಣ್ಣ ಪ್ರಿಯ. ಹಾಗೆ ವಾರದ ಪ್ರತಿಯೊಂದು ದಿನವನ್ನು ಬೇರೆ ಬೇರೆ ದೇವರಿಗೆ ಅರ್ಪಿಸಲಾಗಿದೆ. ಜೀವನದಲ್ಲಿ ಯಶಸ್ಸು ಸಿಗದೆ ಆರ್ಥಿಕ ಸಮಸ್ಯೆಯಿಂದ ಬಳಲುವವರು ಈ ಉಪಾಯವನ್ನು ಅನುಸರಿಸಿದ್ರೆ ಸುಲಭವಾಗಿ ಯಶಸ್ಸು ಗಳಿಸಬಹುದು.
ಭಾನುವಾರ : ಭಾನುವಾರ ಸೂರ್ಯನಿಗೆ ಅರ್ಪಿತವಾದ ದಿನ. ಅಂದು ಯಾವುದೇ ಬಣ್ಣದ ಒಂದು ವಸ್ತುವನ್ನು ತಂದು ಮಕ್ಕಳ ರೂಮಿನಲ್ಲಿಡಿ.
ಸೋಮವಾರ : ಸೋಮವಾರ ಶಿವನಿಗೆ ಪ್ರಿಯವಾದ ದಿನ. ಈ ದಿನ ಬಿಳಿ ಬಣ್ಣ ಶುಭಕರ. ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗ್ತಿದ್ದರೆ ಸೋಮವಾರದ ದಿನ ಬಿಳಿ ಬಣ್ಣದ ಮೂರ್ತಿಯನ್ನು ಮನೆಗೆ ತನ್ನಿ.
ಮಂಗಳವಾರ : ಮಂಗಳವಾರ ಹನುಮಂತನಿಗೆ ಅರ್ಪಿತವಾದ ದಿನ. ಮಂಗಳವಾರ ಕೆಂಪು ಅಥವಾ ಕಿತ್ತಳೆ ಬಣ್ಣದ ಶೋ ಪೀಸನ್ನು ಮನೆಗೆ ತಂದು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಮಂಗಳಕರ.
ಬುಧವಾರ : ಬುಧವಾರ ಗಣೇಶನಿಗೆ ಪ್ರಿಯವಾದ ದಿನ. ಗಣೇಶನಿಗೆ ದರ್ಭೆ ಪ್ರೀತಿ. ಹಾಗಾಗಿ ಬುಧವಾರದ ದಿನ ಹಸಿರು ಬಣ್ಣದ ಫೋಟೋ ತಂದು ಮನೆಯ ಮುಖ್ಯ ಗೇಟ್ ಅಥವಾ ಬಾಗಿಲಿಗೆ ಹಾಕಿ.
ಗುರುವಾರ : ಗುರುವಿಗೆ ಈ ದಿನ ಅರ್ಪಿತ. ಈ ದಿನ ಹಳದಿ ಬಣ್ಣದ ವಸ್ತುವನ್ನು ತಂದು ಅಡುಗೆ ಮನೆಯಲ್ಲಿಡಿ.
ಶುಕ್ರವಾರ : ಶುಕ್ರವಾರ ದೇವಿಯ ದಿನ. ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆಯನ್ನು ತಂದು ದೇವರ ಮನೆಯಲ್ಲಿಡಿ.
ಶನಿವಾರ : ಶನಿದೇವನಿಗೆ ಅರ್ಪಿತವಾಗಿರುವ ಶನಿವಾರದಂದು ನೀಲಿ ಅಥವಾ ಕಪ್ಪು ಬಣ್ಣದ ವಸ್ತುವನ್ನು ಮನೆಗೆ ತನ್ನಿ.