ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ. ಕೆಲವರು ಎಷ್ಟು ಕಷ್ಟಪಟ್ಟರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕೆಲಸದ ಜೊತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ.
ನೀವು ನಂಬಿ ಬಿಡಿ ಕೆಲವೊಂದು ಘಟನೆಗಳು, ಶಕುನಗಳು ನಮ್ಮ ಮುಂದಿನ ಜೀವನದಲ್ಲಿ ಸಿಗುವ ಯಶಸ್ಸಿನ ಬಗ್ಗೆ ಮುನ್ಸೂಚನೆ ನೀಡುತ್ತವೆ.
ಹಗಲಿನ ವೇಳೆ ಅದರಲ್ಲೂ ಊಟದ ವೇಳೆ ಹಲ್ಲಿ ಕೂಗಿದ ಧ್ವನಿ ಕೇಳಿದ್ರೆ ಅದು ಬಹಳ ಒಳ್ಳೆಯದು. ಇದು ಭವಿಷ್ಯದ ಲಾಭ ಹಾಗೂ ಪ್ರಗತಿಯ ಸಂಕೇತವಾಗಿದೆ.
ಕನಸಿನಲ್ಲಿ ಹಾವು ಕಂಡ್ರೆ ಅದರಲ್ಲೂ ಕಚ್ಚಿದಂತೆ ಕಂಡ್ರೆ ಹೆದರುವ ಅಗತ್ಯವಿಲ್ಲ. ಇದೊಂದು ಒಳ್ಳೆಯ ಶಕುನ. ನಿಮಗೆ ಸಂತೋಷದ ಸುದ್ದಿ ಸಿಗಲಿದೆ. ಕೆಲಸದಲ್ಲಿ ಲಾಭವಾಗಲಿದ್ದು, ಉದ್ಯೋಗದಲ್ಲಿ ಉನ್ನತಿ ಸಿಗಲಿದೆ.
ಹಲ್ಲಿ ನಿಮ್ಮ ಬಲಗಡೆಯಿಂದ ಬಿದ್ದರೆ ಅದು ಶುಭ ಶಕುನವಾಗಿದೆ.
ರಾತ್ರಿ ವೇಳೆ ಗೂಬೆಯ ಧ್ವನಿ ಕೇಳಿದ್ರೆ ಇದು ಲಾಭ ಹಾಗೂ ಯಶಸ್ಸಿನ ಸಂಕೇತವಾಗಿದೆ. ನಿಮ್ಮ ಆಸೆ ಸುಲಭವಾಗಿ ಈಡೇರುತ್ತದೆ ಎಂದರ್ಥ.
ಮಧ್ನಾಹ್ನದ ವೇಳೆ ಮನೆಯ ಮೇಲೆ ಕಾಗೆ ಬಂದು ಕುಳಿತುಕೊಂಡು ಕೂಗಿದ್ರೆ ಶುಭ ಸಂಕೇತ. ಹಾಗೆ ಬೆಳ್ಳಂಬೆಳಿಗ್ಗೆ ಕೂಗಿದ್ರೆ ಮನೆಗೆ ಅತಿಥಿಗಳು ಬರುತ್ತಾರೆಂದುಕೊಳ್ಳಿ.
ನಿಮ್ಮ ಮೂಗಿನ ನರ ಕುಣಿದಂತೆ ಅನುಭವವಾದ್ರೆ ಘನತೆ, ಆದಾಯ ಹೆಚ್ಚಾಗಲಿದೆ.