ನಟ ರಮೇಶ್ ಅರವಿಂದ್ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುವ ನಟ. ಎಷ್ಟೋ ಸಿನಿಮಾಗಳ ಮೂಲಕ ಜನ ಮನ ಗೆದ್ದ ಈ ಬಹುಭಾಷಾ ನಟ ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಅವರ ಬಹುದಿನದ ಆಸೆಯಂತೆ ಯಕ್ಷಗಾನ ಡ್ರೆಸ್ ನಲ್ಲಿ ನೋಡುಗರನ್ನು ಸೆಳೆಯುತ್ತಿದ್ದಾರೆ.
ಸದ್ಯ ಉಡುಪಿ ಪ್ರವಾಸದಲ್ಲಿ ರಮೇಶ್ ಇದ್ದಾರೆ. ಇಲ್ಲಿನ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ವೇಷ ಮತ್ತು ಬಣ್ಣಗಾರಿಕೆಯನ್ನು ಕಲಾವಿದ ಶೈಲೇಶ್ ಮಾಡಿದ್ದಾರೆ. ಅಂತರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು ಅವರು ರಮೇಶ್ ಅರವಿಂದ್ ಅವರ ಫೋಟೋ ಶೂಟ್ ಮಾಡಿದ್ದಾರೆ.
ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ರಮೇಶ್ ಅರವಿಂದ್ ಬಂದಿದ್ದರು. ಈ ವೇಳೆ ವೇಷ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಇನ್ನು ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.