ಹಣ ಗಳಿಸಲು ಹತ್ತಾರು ದಾರಿಗಳಿವೆ. ಆದ್ರೆ ಅದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ಧಾರಿ ನಮ್ಮದು. ಅಷ್ಟೇ ಅಲ್ಲ ಗಳಿಸಿದ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಮಾತ್ರ ಅದರ ಲಾಭ ಪಡೆಯಬಹುದು. ಇತ್ತೀಚಿನ ದಿನಗಳಲ್ಲಂತೂ ಹಣ ಹೂಡಿಕೆಗೆ ಹಲವಾರು ವಿಭಿನ್ನ ಮಾಧ್ಯಮಗಳಿವೆ.
ಕೆಲವರು ಷೇರು ವಹಿವಾಟಿನಲ್ಲಿ ತೊಡಗಿದ್ರೆ ಇನ್ನು ಕೆಲವರು ಹಣ ಸುರಕ್ಷಿತವಾಗಿರುತ್ತದೆ ಎಂಬ ಭಾವನೆಯಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹಣವನ್ನು ಹೂಡಿಕೆ ಮಾಡಿಬಿಡ್ತಾರೆ. ಆದ್ರೆ ಮ್ಯೂಚುವಲ್ ಫಂಡ್ ಸಂಪೂರ್ಣ ಸುರಕ್ಷಿತವೇನಲ್ಲ, ಇದು ಕೂಡ ಅಪಾಯಕಾರಿ ಹೂಡಿಕೆಗಳಲ್ಲೊಂದು. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಅನೇಕರು ಅದರ ಅನಾನುಕೂಲಗಳನ್ನು ತಿಳಿಯದೇ ಹೂಡಿಕೆ ಮಾಡಿಬಿಡುತ್ತಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಮ್ಯೂಚುವಲ್ ಫಂಡ್ ಕೂಡ ಷೇರು ಮಾರುಕಟ್ಟೆಗೆ ಲಿಂಕ್ ಆಗಿದೆ. ಇದರಲ್ಲಿ, ಕೆಲವು ಷೇರುಗಳನ್ನು ಬೆರೆಸಿ ನಿಧಿಯನ್ನು ರಚಿಸಲಾಗುತ್ತದೆ. ಮ್ಯೂಚುಯಲ್ ಫಂಡ್‌ಗಳಿಂದ ಪ್ರಯೋಜನಗಳ ಜೊತೆಗೆ ಕೆಲವು ಅನಾನುಕೂಲತೆಗಳೂ ಇವೆ. ಈ ಅನಾನುಕೂಲಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬಾರದು. ಈ ನಷ್ಟಗಳ ಬಗ್ಗೆ ನೀವು ಗಮನ ಹರಿಸದಿದ್ದರೆ ಕೊನೆಯಲ್ಲಿ ಹಣ ಕಳೆದುಕೊಳ್ಳಬೇಕಾಗಿ ಬರಬಹುದು. ಇದನ್ನು ತಪ್ಪಿಸಲು ಪ್ರತಿಯೊಂದು ವಿಷಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.
ಮ್ಯೂಚುವಲ್ ಫಂಡ್‌ಗಳ ಅನಾನುಕೂಲತೆಗಳನ್ನು ಪಟ್ಟಿ ಮಾಡೋದಾದ್ರೆ,
ರಿಟರ್ನ್ಸ್ ಖಾತರಿಯಿಲ್ಲ…..
ಮ್ಯೂಚುಯಲ್ ಫಂಡ್ ವೆಚ್ಚ ಅಧಿಕ……
ಎಕ್ಸಿಟ್ ಲೋಡ್ ಇರುತ್ತದೆ…..
ಲಾಕ್ ಇನ್ ಅವಧಿ…..
ರಿಟರ್ನ್ ಮೇಲೆ ತೆರಿಗೆ……
ನಿಧಿಯ ನಿಯಂತ್ರಣದ ಕೊರತೆ…..
ನೇರ ಹೂಡಿಕೆಯಿಂದ ನಷ್ಟದ ಭಯ……
ಯೋಜನೆ ಆಯ್ಕೆಯಲ್ಲಿ ತಪ್ಪು….…
ಇಷ್ಟೆಲ್ಲಾ ಅಪಾಯಗಳಿರುವುದರಿಂದ ಮ್ಯೂಚುವಲ್ ಫಂಡ್‌ನಲ್ಲಿ ಬ್ಲೈಂಡ್ ಆಗಿ ಹೂಡಿಕೆ ಮಾಡಬೇಡಿ. ಮ್ಯೂಚುವಲ್ ಫಂಡ್‌ನ ಅನಾನುಕೂಲಗಳ ಬಗ್ಗೆ ತಿಳಿದುಕೊಂಡು ಮತ್ತು ನಿಮ್ಮ ಅಗತ್ಯವನ್ನು ಅರ್ಥಮಾಡಿಕೊಂಡು ಹಣ ಹೂಡಿಕೆ ಮಾಡಿ. ಇದರಿಂದ ಮಾತ್ರ ನಷ್ಟವನ್ನು ತಪ್ಪಿಸಲು ಸಾಧ್ಯ.