ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದ ಹೊಗೆ: ಭಯಾನಕ ವಿಡಿಯೋ ವೈರಲ್ 23-02-2022 7:17AM IST / No Comments / Posted In: Latest News, Live News, International ಪ್ರಪಂಚದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಟಲಿಯ ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಹೊಗೆ ಚಿಮ್ಮಿದೆ. ಸುಮಾರು 12 ಕಿ.ಮೀ ದೂರದವರೆಗೆ ಹೊಗೆ ಮತ್ತು ಬೂದಿಯನ್ನು ಹೊರಹಾಕಿದೆ. ಎಟ್ನಾದಿಂದ ಲಾವಾ ಹರಿವು ಪರ್ವತದ ಆಗ್ನೇಯ ಇಳಿಜಾರಿನಲ್ಲಿರುವ ಕುಳಿಯ ಸುತ್ತಲೂ ಕೇಂದ್ರೀಕೃತವಾಗಿದೆ ಎಂದು ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಮತ್ತು ವಲ್ಕನಾಲಜಿ ತಿಳಿಸಿದೆ. ಪೂರ್ವ ಸಿಸಿಲಿಯ 7.5 ಮೈಲು ದೂರದವರೆಗೆ ಹೊಗೆ ಮತ್ತು ಬೂದಿ ಆವರಿಸಿದೆ. ಕಳೆದ ಫೆಬ್ರವರಿಯಲ್ಲಿ ಪೂರ್ವ ಸಿಸಿಲಿಯಲ್ಲಿ ಉಂಟಾದ ಸ್ಫೋಟದಿಂದಾಗಿ ಆಕಾಶದಲ್ಲಿ ಮಿಂಚು ಗೋಚರಿಸಿತ್ತು. ಇನ್ನು ಜ್ವಾಲಾಮುಖಿಯಿಂದಾಗಿ ಜನವಸತಿ ಇರುವ ಪಟ್ಟಣಗಳಲ್ಲಿ ಯಾವುದೇ ಆಸ್ತಿ ಹಾನಿ ಸಂಭವಿಸಿಲ್ಲ. ಸೋಮವಾರ ಮಧ್ಯಾಹ್ನದ ವೇಳೆಗೆ ಕುಳಿಯಿಂದ ಲಾವಾ ಹರಿವು ನಿಂತಿದೆ ಎಂದು ಹೇಳಲಾಗಿದೆ. ಎಟ್ನಾದ ಇತಿಹಾಸದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. 1669 ರಲ್ಲಿ, ಲಾವಾದಿಂದಾಗಿ ಸಿಸಿಲಿ ದ್ವೀಪದ ಪೂರ್ವದ ಅತಿದೊಡ್ಡ ನಗರವಾದ ಕ್ಯಾಟಾನಿಯಾದ ಒಂದು ಭಾಗವನ್ನು ಹೂತು ಹಾಕಿತ್ತು. ಅಲ್ಲದೆ ಡಜನ್ಗಟ್ಟಲೆ ಹಳ್ಳಿಗಳನ್ನು ನಾಶಪಡಿಸಿತ್ತು. 1983 ರಲ್ಲಿ ಲಾವಾ ಭೀತಿಯಿರುವ ಪಟ್ಟಣಗಳನ್ನು ಸ್ಥಳಾಂತರಿಸಲು ಡೈನಮೈಟ್ ಅನ್ನು ಬಳಸಲಾಯಿತು. 1992 ರಲ್ಲಿ, ಎಟ್ನಾದಿಂದ ತಿಂಗಳುಗಳವರೆಗೆ ಹರಿಯುವ ಲಾವಾವನ್ನು ತಡೆಯಲು ಮಿಲಿಟರಿ ಮಣ್ಣಿನ ಗೋಡೆಯನ್ನು ನಿರ್ಮಿಸಿತು. ಇದರಿಂದಾಗಿ ಅದು ಇಳಿಜಾರಿನ ಹಳ್ಳಿಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಿತು. VIDEO: Italy's Mount Etna spews smoke and ash. Mount Etna, one of the world's most active volcanoes, belches smoke and ashes in a new eruption, briefly forcing the closure of the airport of Catania in Sicily pic.twitter.com/5htm57WVFY — AFP News Agency (@AFP) February 22, 2022