alex Certify ಮೋಮೋಸ್‌ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಈ ಟೇಸ್ಟಿ ಫುಡ್‌ನಲ್ಲಿದೆ ಇಷ್ಟೆಲ್ಲಾ ಅಪಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಮೋಸ್‌ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಈ ಟೇಸ್ಟಿ ಫುಡ್‌ನಲ್ಲಿದೆ ಇಷ್ಟೆಲ್ಲಾ ಅಪಾಯ….!

ಬಗೆಬಗೆಯ ಚೈನೀಸ್‌ ತಿನಿಸುಗಳು ಭಾರತದಲ್ಲೂ ದೊರೆಯುತ್ತವೆ. ಮೋಮೋಸ್‌ ಕೂಡ ಯುವ ಜನತೆಯ ಫೇವರಿಟ್‌ ಆಗಿಬಿಟ್ಟಿದೆ. ಬಹುತೇಕ ಎಲ್ಲರೂ ಇಷ್ಟಪಡುವಂತಹ ಫಾಸ್ಟ್‌ ಫುಡ್‌ ಇದು. ರಸ್ತೆ ಬದಿಯಲ್ಲೂ ಮೋಮೋಸ್‌ ಅಂಗಡಿಗಳನ್ನು ನೀವು ಗಮನಿಸಿರಬಹುದು.

ಈ ರುಚಿಯಾದ ಮೋಮೋಸ್‌ಗಳ ಅತಿಯಾದ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಮೋಮೋಸ್‌ ಅನ್ನು ಮೈದಾದಿಂದ ಮಾಡಲಾಗುತ್ತದೆ. ಇದರಲ್ಲಿ ಅಜೋಡಿಕಾರ್ಬೊನಮೈಡ್, ಬೆನ್ಝಾಯ್ಲ್ ಪೆರಾಕ್ಸೈಡ್ನಂತಹ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕರ.

ದೇಹಕ್ಕೆ ತೀವ್ರ ಹಾನಿ

ಮೋಮೋಸ್‌ ಅನ್ನು ಮೃದುವಾಗಿಡಲು ಅಲೋಕ್ಸಾನ್ ಎಂಬ ಅಂಶವನ್ನು ಸಹ ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಮೊಸ್ ತಯಾರಿಸಲು ಹಿಟ್ಟಿಗೆ ಸೇರಿಸುವ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಈ ಅಂಶಗಳು ದೇಹದ ಮೇದೋಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತವೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ನಾನ್ ವೆಜ್ ಮೋಮೋಸ್‌ನಿಂದ ಅಪಾಯ

ವೆಜ್ ಮತ್ತು ನಾನ್ ವೆಜ್ ಮೊಮೊಗಳನ್ನು ತಯಾರಿಸಲಾಗುತ್ತದೆ. ನಾನ್-ವೆಜ್ ಮೊಮೊಸ್ ತಯಾರಿಸಲು ಕೋಳಿ ಮಾಂಸವನ್ನು ಬಳಸಲಾಗುತ್ತದೆ, ಅದರ ಗುಣಮಟ್ಟವು ಉತ್ತಮವಾಗಿಲ್ಲದೇ ಇದ್ದರೆ ಅಪಾಯಕಾರಿ. ಮಾಂಸದ ಗುಣಮಟ್ಟವು ಸರಿಯಿಲ್ಲದೇ ಇದ್ದಾಗ ಅದನ್ನು ಸೇವಿಸಿದವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಮೋಮೋಸ್‌ನ ಕೆಂಪು ಚಟ್ನಿ ಕೂಡ ಹಾನಿಕಾರಕ

ಬಿಸಿ ಬಿಸಿ ಮೋಮೋಸ್‌ ಜೊತೆಗೆ ಕೆಂಪು ಖಾರದ ಚಟ್ನಿಯನ್ನು ಸರ್ವ್‌ ಮಾಡಲಾಗುತ್ತದೆ. ಈ ಚಟ್ನಿ ಕೂಡ ಜನರಿಗೆ ಮೋಡಿ ಮಾಡಿದೆ. ಈ ರುಚಿಕರ ಚಟ್ನಿಗಾಗಿಯೇ ಜನರು ಮುಗಿಬೀಳುತ್ತಾರೆ. ಆದರೆ ತುಂಬಾ ಮಸಾಲೆಯುಕ್ತವಾಗಿರುವ ಈ ಚಟ್ನಿ ಸಹ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಹುದು. ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಪೈಲ್ಸ್ ಅಥವಾ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...