ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಕ್ರೇನ್ನಲ್ಲಿ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾಚರಣೆಗೆ ಕೆಲವು ದಿನಗಳಿಂದ ಟೀಕೆಗಳು ಕೇಳಿ ಬರುತ್ತಿವೆ.
ಉಕ್ರೇನ್ನಿಂದ ಬಂದ ಸಾಕಷ್ಟು ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿಯು ನೀರಸ ಪ್ರತಿಕ್ರಿಯೆ ತೋರಿವೆ ಎಂದು ಆರೋಪಿಸುತ್ತಿದ್ದಾರೆ.
ವಿಪಕ್ಷಗಳು ಕೇಂದ್ರ ಸರ್ಕಾರವು ಉಕ್ರೇನ್ ಯುದ್ಧದ ಪರಿಸ್ಥಿತಿಯ ಲಾಭ ಪಡೆಯುತ್ತಿವೆ ಎಂದು ಆರೋಪಿಸಿರುವ ಬೆನ್ನಲ್ಲೇ ಇದೀಗ ಈ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಜಿ ಜಿಂದಾಬಾದ್ ಎಂದು ಹೇಳುವಂತೆ ಪ್ರೇರೆಪಿಸಲಾಗಿದೆ. ಆದರೂ ಸಹ ವಿದ್ಯಾರ್ಥಿಗಳು ಇದಕ್ಕೆ ನೀರಸ ಪ್ರತಿಕ್ರಿಯೆ ತೋರಿರುವುದನ್ನು ಕಾಣಬಹುದಾಗಿದೆ.
https://twitter.com/ShyamMeeraSingh/status/1499346913274957824?ref_src=twsrc%5Etfw%7Ctwcamp%5Etweetembed%7Ctwterm%5E1499346913274957824%7Ctwgr%5E%7Ctwcon%5Es1_&ref_url=https%3A%2F%2Fjanjwar.com%2Fnational%2Fofficer-says-modi-jindabad-to-chup-ho-gaye-students-filmkar-says-expose-ho-raha-pm-ka-melodrama-top-latest-hindi-news-in-russia-ukraine-war-indian-students-crisis-live-806501