ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ನಮಗೇನು ಭಯ ಇಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಹಿಡಿದುಕೊಂಡು ನಮ್ಮನ್ನು ಹೆದರಿಸಲಾಗದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ
ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿ, ಸೋನಿಯಾ ಗಾಂಧಿ ಹಾಗೂ ತಮ್ಮ ನಿವಾಸ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿ, ಯಂಗ್ ಇಂಡಿಯಾ ಕಂಪನಿಗೆ ಬೀಗ ಮುದ್ರೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರಕ್ರಿಯೆಗಳಿಂದ ನಮ್ಮನ್ನು ಹೆದರಿಸುವ ಪ್ರಯತ್ನದಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ರಕ್ಷಿಸಲು ಹಾಗೂ ಸೌಹಾರ್ದಯುತ ವಾತಾವರಣವನ್ನು ದೇಶದಲ್ಲಿ ಕಾಯ್ದುಕೊಳ್ಳಲು ನಾನು ನನ್ನ ಕೆಲಸ ಮುಂದುವರಿಸುತ್ತೇನೆ. ಅವರು ಏನು ಮಾಡಿದರೂ ಅದಕ್ಕೆ ಅಂಜುವುದಿಲ್ಲ ಎಂದರು.