ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಬಿರುಕು ಬಿಟ್ಟ ರಸ್ತೆಗಳು ಮತ್ತು ಹೊರಹೊಮ್ಮಿದ ಕೆಸರು ಗುಂಡಿಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಲಗಲು ಪೋಸ್ ನೀಡುವುದನ್ನು ನಾವು ನೋಡಬಹುದು.
ದಿನಾಂಕವಿಲ್ಲದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಂತೆ, ಅದು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಬಂದಿದೆ ಎಂದು ವರದಿಯಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಬಿಜೆಪಿ ಮತ್ತು ಈ ಪ್ರದೇಶದಲ್ಲಿ ಅದರ ಆಡಳಿತವನ್ನು ಕೆಣಕಲು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಓರ್ವ ವ್ಯಕ್ತಿ ತನ್ನ ಟ್ವೀಟ್ ಮೂಲಕ ಕಳಪೆ ರಸ್ತೆಯ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ. ರಸ್ತೆಯ ಕಳಪೆ ಸ್ಥಿತಿ ನೋಡಿ ಎಂದು ಬರೆದಿದ್ದಾರೆ.
ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಮಾಜಿ ಕೌನ್ಸಿಲರ್ ಆಗಿದ್ದು, ನಗರದ ರಸ್ತೆಗಳ ದುಃಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಧ್ಯಪ್ರವೇಶಿಸುವಂತೆ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.
ಅಖಿಲೇಶ್ ಯಾದವ್ ಅವರ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಬಿಜೆಪಿ ನಾಯಕ ತಜೀಂದರ್ ಸಿಂಗ್, ಎಸ್‌ಪಿ ನಾಯಕನದ್ದು ನಾಟಕ ಎಂದು ಟೀಕಿಸಿದ್ದಾರೆ. “ಈ ನಾಟಕವನ್ನು ಬಿಟ್ಟು ರಚನಾತ್ಮಕವಾಗಿ ಏನಾದರೂ ಮಾಡಿ” ಎಂದು ಸಲಹೆ ನೀಡಿದ್ದಾರೆ.