
ಪ್ರಾಣಿಯೋ ಅಥವಾ ಕಲ್ಲು ಬಂಡೆಯೋ ಎಂಬ ಶೀರ್ಷಿಕೆಯ ಜೊತೆ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ದೊಡ್ಡ ಬಂಡೆಯ ಅಡಿಯಲ್ಲಿ ದೈತ್ಯ ಮೊಸಳೆ ಆಕಾರದ ರಚನೆಯು ಗೋಚರಿಸುತ್ತದೆ. ಅಂದ ಹಾಗೆ, ಇದು ಸಂಪೂರ್ಣ ಮೊಸಳೆಯಂತೆ ಕಾಣುತ್ತದೆ.
ಆದರೆ ಅಚ್ಚರಿ ಎಂದರೆ ಕೊನೆಗೂ ಇದಕ್ಕೆ ಉತ್ತರ ಸಿಗುತ್ತಿಲ್ಲ. ಇದು ಮೊಸಳೆ ಆಕಾರದ ಕಲ್ಲು ಅಥವಾ ಈಗ ಕಲ್ಲಾಗಿ ಮಾರ್ಪಟ್ಟಿರುವ ಡೈನೋಸಾರ್ ಕಾಲದ ನಿಜವಾದ ಮೊಸಳೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಅದರ ಬಗ್ಗೆ ನಂಬಲಾಗದಷ್ಟು ಗೊಂದಲಕ್ಕೊಳಗಾಗಿದ್ದಾರೆ.
ಈ ಕುತೂಹಲದ ವಿಡಿಯೋ 18 ಮಿಲಿಯನ್ ವೀಕ್ಷಣೆಗಳನ್ನು ಮತ್ತು 145,000 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಇದು ಏನಿರಬಹುದು ಎಂದು ನಿಮಗೆ ಎನಿಸುತ್ತದೆ ನೋಡಿಬಿಡಿ.