ಮೊಸರು ತಿಂದರೆ ಶೀತ, ಕಫ ಕಟ್ಟುತ್ತದೆ ಎಂದು ಅದರಿಂದ ದೂರ ಇರುವವರೇ ಹೆಚ್ಚು. ಹಾಗೆಂದು ಅದನ್ನು ಸರಿಯಾದ ಸಮಯದಲ್ಲಿ ಸೇವಿಸುವ ಮೂಲಕ ಸರ್ವ ರೋಗಗಳಿಂದ ದೂರವಿರಬಹುದು. ಪ್ರತಿ ನಿತ್ಯವೂ ಮೊಸರನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ರಾತ್ರಿ ಹೊತ್ತು ಮೊಸರು ಸೇವನೆ ಮಾಡುವ ಬದಲು ಬೆಳಿಗ್ಗೆ, ಮಧ್ಯಾಹ್ನ ಸೇವಿಸುವುದು ಉತ್ತಮ.
ಮೊಸರು ಹುಳಿ ಮತ್ತು ಸಿಹಿ ಅಂಶದಿಂದ ಕೂಡಿರುವುದರಿಂದ ದೇಹದಲ್ಲಿ ಕಫ ದೋಷವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ನಮ್ಮ ದೇಹದಲ್ಲಿ ಕಫದ ಪ್ರಮಾಣ ಅಧಿಕವಾಗಿ ಇರುತ್ತದೆ. ಹಾಗಾಗಿ ರಾತ್ರಿ ಹೊತ್ತು ಮೊಸರು ಸೇವಿಸಿದರೆ ಕಫ ಮತ್ತು ನೆಗಡಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ತಂಪಾಗಿರುವ ಆಹಾರ ಮತ್ತು ಮೊಸರು ಸೇವನೆಯಿಂದ ನೆಗಡಿ, ಕಫ ಆಗುವವರು ಕಡ್ಡಾಯವಾಗಿ ರಾತ್ರಿ ಸೇವಿಸಬಾರದು. ಧೂಳಿನ ಅಲರ್ಜಿ ಇರುವವರು ರಾತ್ರಿ ಹೊತ್ತು ಮೊಸರು ತಿನ್ನಬಾರದು.