ಮೊಸರು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲು ಹಾಗೂ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮೊಸರು ಉತ್ತಮವಾದ ಖನಿಜಾಂಶ, ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
*ತಲೆಹೊಟ್ಟ ನಿವಾರಿಸಲು 1 ಕಪ್ ಮೊಸರಿಗೆ 5 ಚಮಚ ಮೆಂತ್ಯ ಬೀಜದ ಪುಡಿ, 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.
*ಮೃದು ಹಾಗೂ ನಯವಾದ ಕೂದಲಿಗಾಗಿ 1 ಕಪ್ ಮೊಸರಿಗೆ 1 ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟ ವಾಶ್ ಮಾಡಿ. ಬಳಿಕ ನೀರಿಗೆ ನಿಂಬೆ ರಸ ಮಿಕ್ಸ್ ಮಾಡಿ ಅದರಿಂದ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿ.
*ಬೌನ್ಸಿ ಹಾಗೂ ಹೊಳಪುಳ್ಳ ಕೂದಲನ್ನು ಪಡೆಯಲು 1 ಕಪ್ ಮೊಸರಿಗೆ 20 ದಾಸವಾಳ ಹೋವಿನ ಪೇಸ್ಟ್, 10 ಬೇವಿನ ಎಲೆಗಳ ಪೇಸ್ಟ್ ಹಾಗೂ ಕಿತ್ತಳೆ ರಸ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ತಿಂಗಳಿಗೊಮ್ಮೆ ಮಾಡಿ.