ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ.
ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಹೊತ್ತಿಗೆ ದಪ್ಪ ಮೊಸರಿನೊಂದಿಗೆ ಅನ್ನ ಕಲಸಿಕೊಟ್ಟರೆ ಮೈ ಕೈ ತುಂಬಿಕೊಳ್ಳುತ್ತದೆ ಹಾಗೂ ಪದೇ ಪದೇ ವೈದ್ಯರನ್ನು ಭೇಟಿಯಾಗುವುದೂ ತಪ್ಪುತ್ತದೆ.
ಅಧಿಕ ರಕ್ತದೊತ್ತಡವನ್ನು ತಡೆಯುವ ಮೊಸರು, ಹೃದಯ ಆರೋಗ್ಯದಿಂದ ಕೆಲಸ ಮಾಡಲು ಸಹಕರಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳನ್ನು ಹಾಗೂ ಹಲ್ಲನ್ನು ಬಲಿಷ್ಠವಾಗಿಸುತ್ತದೆ.
ದಿನನಿತ್ಯ ಇದನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗ ಬರದಂತೆ ತಡೆಯಬಹುದು ಎನ್ನುತ್ತವೆ ಸಂಶೋಧನೆಗಳು. ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಮೊಸರು ಮನಸ್ಸನ್ನು ಖುಷಿಯಾಗಿಡುವ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತವೆ.