1 ಕಪ್- ಗಟ್ಟಿ ಅವಲಕ್ಕಿ, 1 ಕಪ್-ಮೊಸರು, ¼ ಕಪ್ ಕಾಯಿ ತುರಿ, 1 ಹಸಿಮೆಣಸು ಚಿಕ್ಕದಾಗಿ ಕತ್ತರಿಸಿಕೊಳ್ಳಿ, 1 ಟೀ ಸ್ಪೂನ್ ಎಣ್ಣೆ, ಸಾಸಿವೆ-1/4 ಟೀ ಸ್ಪೂನ್, ಜೀರಿಗೆ-1/4 ಟೀ ಸ್ಪೂನ್, ಕಡಲೆಬೇಳೆ-1 ಟೀ ಸ್ಪೂನ್, ಉದ್ದಿನಬೇಳೆ-1/2 ಟೀ ಸ್ಪೂನ್, ಕರಿಬೇವು-5 ಎಸಳು, ಇಂಗು-ಚಿಟಿಕೆ, ದಾಳಿಂಬೆ ಕಾಳು-1/4 ಕಪ್, 1 ಟೇಬಲ್ ಸ್ಪೂನ್-ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿದ್ದು.
ಮಾಡುವ ವಿಧಾನ:
ಮೊದಲಿಗೆ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಇದರ ನೀರನ್ನೆಲ್ಲಾ ಶೋಧಿಸಿ ಒಂದು ಬಟ್ಟಲಿನಲ್ಲಿ ಹರವಿ ಹಾಕಿ.
ನಂತರ ಒಂದು ದೊಡ್ಡ ಬೌಲ್ ಗೆ ಅವಲಕ್ಕಿ ಮೊಸರು, ದಾಳಿಂಬೆ ಬೀಜ, ಕಾಯಿತುರಿ, ಉಪ್ಪು ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಅವಲಕ್ಕಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಮೊಸರವಲಕ್ಕಿ ರೆಡಿ.