ಕಾಳುಗಳನ್ನು ಮೊಳಕೆ ಬರಿಸುವುದರಿಂದ ಅದರಲ್ಲಿ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ನಾರಿನಾಂಶ ದೇಹದ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನ ಹೊರಹಾಕುತ್ತದೆ. ಅಮೈನೋ ಆಮ್ಲಗಳ ಕೊರತೆಯಿಂದ ಸ್ಥೂಲ ಕಾಯದ ಸಮಸ್ಯೆ ಎದುರಾಗುತ್ತದೆ. ನಿರಂತರವಾಗಿ ಸರಿಯಾದ ಆಹಾರ ಕ್ರಮವಿಲ್ಲದಿದ್ದರೆ ಸ್ಥೂಲ ಕಾಯ ಬೆಳೆಯುತ್ತದೆ. ಇದನ್ನು ಕರಗಿಸಲು ಮೊಳಕೆ ಕಟ್ಟಿದ ಕಾಳುಗಳು ಅತ್ಯುತ್ತಮ ಉಪಾಯ.
ಮೊಳಕೆಗಳಲ್ಲಿ ಖನಿಜವು ವಿವಿಧ ರೂಪದಲ್ಲಿ ಅಡಗಿರುತ್ತದೆ. ಮೊಳಕೆ ಒಡೆಯುವಾಗ ಕ್ಯಾಲ್ಸಿಯಂ, ಮೆಗ್ನೀಸಿಯಂ ಇತ್ಯಾದಿಗಳು ಉತ್ಪತ್ತಿ ಆಗುತ್ತವೆ. ಇವುಗಳು ನಮ್ಮ ಆಹಾರದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಸಾಮಾನ್ಯವಾಗಿ ತರಕಾರಿ ಮತ್ತು ಹಣ್ಣುಗಳಿಗಿಂತ ಮೊಳಕೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಿಣ್ವಗಳು ಇವೆ ಎಂದು ಅಧ್ಯಯನಗಳಿಂದ ದೃಢಪಟ್ಟಿದೆ.
ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಈ ಕಾಳು ಅಥವಾ ಧಾನ್ಯದಲ್ಲಿ ಇರುವ ಶಕ್ತಿಯು ಬಿಡುಗಡೆ ಹೊಂದುತ್ತದೆ. ಮೊಳಕೆ ಕಾಳುಗಳಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು ಅವು ಪಚನ ಕ್ರಿಯೆಯನ್ನು ಸುಲಭ ಮಾಡುತ್ತದೆ.