ಗುಜರಾತಿನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ರಜಾ ದಿನವಾದ ಭಾನುವಾರದಂದು ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಲ್ಲಿಗೆ ಆಗಮಿಸಿದ್ದು, ಸೇತುವೆ ಕುಸಿದು ಬಿದ್ದ ಪರಿಣಾಮ ಘೋರ ದುರಂತ ಸಂಭವಿಸಿದೆ.
ಇದೀಗ ಈ ದುರಂತಕ್ಕೆ ಸಂಭವಿಸಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಹಿರಂಗವಾಗಿದೆ. ತೂಗು ಸೇತುವೆ ನವೀಕರಣದ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿ ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡಿತ್ತು ಎನ್ನಲಾಗಿದೆ.
ಅಲ್ಲದೆ ನವೀಕರಣದ ವೇಳೆ ಕೇಬಲ್ ಹಳೆಯದಾಗಿ ತುಕ್ಕು ಹಿಡಿದಿದ್ದರೂ ಸಹ ಅವುಗಳನ್ನು ಬದಲಿಸಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಕಾವುಲುಗಾರರು, ಟಿಕೆಟ್ ಸಿಬ್ಬಂದಿ ಸೇರಿದಂತೆ ಈಗ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಒರೆವಾ ಕಂಪನಿಯ ಬಂಧಿತ ಸಿಬ್ಬಂದಿ ದೀಪಕ್ ಪರೇಕ್ ಎಂಬಾತ ಈ ಘಟನೆ ನಡೆದಿರುವುದು ದುರದೃಷ್ಟಕರ. ಇದು ದೇವರ ಇಚ್ಛೆ ಎಂದು ಹೇಳಿದ್ದಾನೆ.