ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ.
ಮೊಬೈಲ್ ಗೇಮಿಂಗ್ ಮತ್ತು ಸೋಶಿಯಲ್ ಮಿಡಿಯಾ ಅಪ್ಲಿಕೇಶನ್ ಗಳ ಹಾವಳಿ ಹೆಚ್ಚಾಗಿದೆ. ಮೊಬೈಲ್ ಅನುಕೂಲಕ್ಕಿಂತ ಅಪಾಯ ಹೆಚ್ಚು ಮಾಡ್ತಿದೆ. ಸಂಶೋಧನೆಯ ಪ್ರಕಾರ, ಬೊಜ್ಜು ಹೆಚ್ಚಾಗಲು ಮೊಬೈಲ್ ಬಳಕೆ ಕೂಡ ಒಂದು ಕಾರಣ.
ಸಂಶೋಧನೆಯ ಪ್ರಕಾರ, ದಿನಕ್ಕೆ 5 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಮೊಬೈಲ್ ಬಳಕೆ ಮಾಡಿದಲ್ಲಿ ಬೊಜ್ಜು ಬರೋದು ಖಂಡಿತ. ಏಕೆಂದರೆ ಹೆಚ್ಚು ಹೊತ್ತು ಕುಳಿತಿರುವಾಗ ದೇಹ ಚಟುವಟಿಕೆಯಲ್ಲಿರದೆ ಇರೋದು ಬೊಜ್ಜಿಗೆ ಕಾರಣ.
ಈ ಸಂಶೋಧನೆಯನ್ನು1000 ವಿದ್ಯಾರ್ಥಿಗಳ ಮೇಲೆ ಮಾಡಲಾಯಿತು. ಇದರ ಪ್ರಕಾರ ಮೊಬೈಲ್ ಜಾಸ್ತಿ ಬಳಸುವವರು ಹೆಚ್ಚಿನ ಸಿಹಿ ಪದಾರ್ಥ, ಪಾನೀಯಗಳು, ಫಾಸ್ಟಫುಡ್ ಮತ್ತು ಕ್ಯಾಂಡಿಗಳನ್ನು ತಿನ್ನುತ್ತಾರಂತೆ. ಸದಾ ಮೊಬೈಲ್ ನಲ್ಲಿ ಬ್ಯುಸಿಯಿರುವ ಕಾರಣ ವ್ಯಾಯಾಮ ಕಡಿಮೆ ಮಾಡ್ತಾರೆ. ಇದರಿಂದಾಗಿ ದೇಹದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಇದು ಸ್ಥೂಲಕಾಯ ಮತ್ತು ನಿದ್ರಾಹೀನತೆಯಂತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.