ವಾಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದೆ.
ತಾಪಮಾನ ಹೆಚ್ಚಳದಿಂದ ಸರಣಿ 7 ರ ಆಪಲ್ ವಾಚ್ ಸ್ಪೋಟಗೊಂಡಿದೆ. ಮೊದಲು ಈ ವಾಚ್ ನ ಹಿಂಬದಿ ಬಿರುಕು ಬಿಟ್ಟಿತ್ತಂತೆ. ಈ ವಾಚ್ ಹಿಂಬದಿಯಲ್ಲಿ ಬಿರುಕು ಬಂದ ತಕ್ಷಣ ಆಪಲ್ ಬೆಂಬಲಕ್ಕೆ ಈ ವಾಚ್ ಬಳಕೆದಾರ ಕರೆ ಮಾಡಿದ್ದಾನೆ. ಆಗ ಕಂಪನಿ ನಾವು ಹೇಳುವವರಿಗೆ ಈ ವಾಚ್ ಮುಟ್ಟಬೇಡಿ ಎಂದು ಹೇಳಿದೆ.
ಇದಾಗ ನಂತರ ವಾಚ್ ದೂರ ಇಟ್ಟು ರಾತ್ರಿ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ತಾಪಮಾನ ಇನ್ನೂ ಹೆಚ್ಚಾಗಿತ್ತಂತೆ. ತಾಪಮಾನ ಯಾವಾಗ ಹೆಚ್ಚಾಯ್ತೋ ವಾಚ್ ನ ಮುಂಭಾಗವೂ ಬಿರುಕು ಬಿಟ್ಟಿದೆ. ತಕ್ಷಣ ಅದನ್ನು ಮನೆಯಿಂದ ಆಚೆ ಎಸೆದಿದ್ದಾನೆ. ಆಗ ಅದು ಸ್ಪೋಟಗೊಂಡಿದೆ. ಇನ್ನು ಈ ಘಟನೆಗೆ ಬಳಕೆದಾರರ ನಿರ್ಲಕ್ಷ್ಯ ಕಾರಣ ಎಂದು ಕಂಪನಿ ಹೇಳಿದೆ.