ಮೊಬೈಲ್ ಫೋನ್ ಬಳಕೆದಾರರಿಗೆ ಇಲ್ಲೊಂದು ಮಹತ್ವದ ಮಾಹಿತಿ ಇದೆ. ಏಕೆಂದರೆ ಕೆಲವೊಂದು ಸಿಮ್ಗಳು ಇಂದಿನಿಂದ ಕಾರ್ಯನಿರ್ವಹಿಸುವುದನ್ನು ಬಂದ್ ಮಾಡಲಿವೆ. ಕಳೆದ ವರ್ಷ ಡಿಸೆಂಬರ್ 7ರಂದೇ ದೂರಸಂಪರ್ಕ ಇಲಾಖೆ ಈ ಆದೇಶವನ್ನು ಹೊರಡಿಸಿತ್ತು.
ಈ ಆದೇಶದ ಅಡಿಯಲ್ಲಿ ಹೆಚ್ಚೆಚ್ಚು ಸಿಮ್ ಕಾರ್ಡ್ ಹೊಂದಿರುವವರ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. 9ಕ್ಕಿಂತ ಹೆಚ್ಚು ಸಿಮ್ಗಳನ್ನು ಹೊಂದಿರುವ ಬಳಕೆದಾರರನ್ನು 45 ದಿನಗಳ ಅವಧಿಯಲ್ಲಿ ಮರುಪರಿಶೀಲನೆ ಮಾಡಬೇಕು ಎಂದು ದೂರಸಂಪರ್ಕ ಇಲಾಖೆ ಆದೇಶ ನೀಡಿತ್ತು.
ಅದರಂತೆಯೇ ಆ 45 ದಿನಗಳ ಗಡುವು ಇಂದಿಗೆ ಪೂರ್ಣಗೊಂಡಿದೆ. ಹೀಗಾಗಿ ಪರಿಶೀಲನೆಗೆ ಒಳಗಾಗದ ಸಿಮ್ಗಳು ಕಾರ್ಯ ನಿರ್ವಹಿಸುವುದನ್ನು ಇಂದಿನಿಂದ ಬಂದ್ ಮಾಡಿವೆ.
ಪರಿಶೀಲನೆಗೆ ಒಳಗಾಗದೇ 9ಕ್ಕೂ ಅಧಿಕ ಸಿಮ್ಗಳನ್ನು ಹೊಂದಿರುವ ಬಳಕೆದಾರರಿಗೆ 30 ದಿನಗಳಲ್ಲಿ ಹೊರ ಹೋಗುವ ಹಾಗೂ 45 ದಿನಗಳ ಒಳಗಾಗಿ ಒಳಬರುವ ಕರೆಗಳನ್ನು ಸ್ಥಗಿತಗೊಳಿಸುವಂತೆ ಟೆಲಿಕಾಂ ಆಪರೇಟರ್ಗಳಿಗೆ ದೂರ ಸಂಪರ್ಕ ಇಲಾಖೆ ಆದೇಶಿಸಿತ್ತು. ಅಲ್ಲದೇ 60 ದಿನಗಳಲ್ಲಿ ಸಿಮ್ನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಹೇಳಲಾಗಿದೆ.
ಅಂತರರಾಷ್ಟ್ರೀಯ ರೋಮಿಂಗ್‌ಗಾಗಿ ಪ್ರತ್ಯೇಕ ನಿಯಮಗಳು
ಅಂತರರಾಷ್ಟ್ರೀಯ ರೋಮಿಂಗ್, ಅನಾರೋಗ್ಯ ಮತ್ತು ಅಂಗವಿಕಲ ವ್ಯಕ್ತಿಗಳಿಗೆ 30 ದಿನಗಳ ಹೆಚ್ಚುವರಿ ಸಮಯವನ್ನು ನೀಡುವುದಾಗಿ ಘೋಷಿಸಲಾಗಿದೆ, ಇದು ಭಾರತದಲ್ಲಿ ವಾಸಿಸುವ ಭಾರತೀಯ ಜನರಿಂದ ಸ್ವಲ್ಪ ಭಿನ್ನವಾಗಿದೆ. ಜನರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.