ಮದುವೆ ಬಗ್ಗೆ ಪ್ರತಿಯೊಬ್ಬ ಹುಡುಗಿಯೂ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಮದುವೆ ತಯಾರಿಯ ಜೊತೆ ಜೊತೆಯಲ್ಲಿ ಮದುವೆ ದಿನ ನೆನೆದು ಹುಡುಗಿ ಖುಷಿಯಾಗ್ತಾಳೆ. ಜೊತೆ ಜೊತೆಯಲ್ಲಿ ಹೊಸ ಮನೆಗೆ ಹೇಗೆ ಹೊಂದಿಕೊಳ್ಳಬೇಕೆಂಬುದರ ಬಗ್ಗೆ ಹೆದರಿಕೆ ಆರಂಭವಾಗಿರುತ್ತದೆ.
ಮದುವೆಯ ನಂತರದ ಮೊದಲ ರಾತ್ರಿ ಪತಿ, ಪತ್ನಿ ಇಬ್ಬರಿಗೂ ಬಹಳ ವಿಶೇಷ. ಈ ರಾತ್ರಿ ಕುರಿತಂತೆ ಹುಡುಗಿ ಮನಸ್ಸಿನಲ್ಲಿ ಗೊಂದಲ ಇದ್ದೇ ಇರುತ್ತದೆ. ಮದುವೆಯ ಮರು ದಿನ ಹುಡುಗಿ ಹೊಸ ಜೀವನಕ್ಕೆ ಕಾಲಿಡುತ್ತಾಳೆ. ಹಾಗಾಗಿ ಈ ಬಗ್ಗೆ ಅನೇಕ ಪ್ರಶ್ನೆ, ಅನುಮಾನಗಳು ಮನಸ್ಸಿನಲ್ಲಿ ಬಂದು ಹೋಗುತ್ತವೆ.
ಬೆಳಿಗ್ಗೆ ಬೇಗ ಏಳಬೇಕು ಎನ್ನುವ ವಿಷಯ ಮಧುಮಗಳನ್ನು ಬಹಳಷ್ಟು ಕಾಡುತ್ತದೆ. ಮರುದಿನ ಏನು ಕೆಲಸ ಮಾಡಬೇಕು ಎಂಬ ಬಗ್ಗೆ ಆಕೆ ಚಿಂತಿಸುತ್ತಾಳೆ.
ಮದುವೆಯ ಮರುದಿನ ಎಲ್ಲ ಹುಡುಗಿಯರನ್ನು ಕಾಡುವ ಪ್ರಶ್ನೆ, ಬಾಳ ಸಂಗಾತಿಯ ಬಗ್ಗೆ. ಸರಿಯಾದ ಬಾಳ ಸಂಗಾತಿಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನಾ? ಈ ಕುಟುಂಬಕ್ಕೆ ನಾನು ಹೊಂದಿಕೊಳ್ಳಬಲ್ಲೆನಾ ಎಂದು ಯೋಚಿಸುತ್ತಾರೆ.
ಮದುವೆ ಮರುದಿನ ಯಾವ ಡ್ರೆಸ್ ಧರಿಸಬೇಕೆಂದು ಚಿಂತಿಸುತ್ತಾರೆ. ಗಂಡನ ಮನೆಯವರಿಗೆ ಮೆಚ್ಚುಗೆಯಾಗುವ ಯಾವ ಉಡುಪು ಧರಿಸಲಿ ಎಂದು ಯೋಚಿಸುತ್ತಾರೆ.
ಫೇಸ್ ಬುಕ್ ಸ್ಟೇಟಸ್ ಬದಲಾಯಿಸುವುದು ಒಂದು ಕೆಲಸ. ಇತ್ತೀಚೆಗೆ ಎಲ್ಲವೂ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಆಗಬೇಕು. ಹಾಗಾಗಿ ಹುಡುಗಿಯರು ಮದುವೆಯಾದ ಮರುದಿನ ಸ್ಟೇಟಸ್ ಬದಲಾಯಿಸುವ ಬಗ್ಗೆಯೂ ಯೋಚಿಸುತ್ತಾರೆ.