
ಮೊಬೈಲ್ನಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಈ ತಂತ್ರಜ್ಞಾನ ಜನರ ಜೀವನವನ್ನು ಸುಲಭಗೊಳಿಸಿದೆ ಅನ್ನೋದು ಸತ್ಯ, ಆದರೆ ಕೆಲವೊಮ್ಮೆ ಒಂದು ಸಣ್ಣ ತಪ್ಪು ಎಲ್ಲವನ್ನೂ ನಾಶಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಅದೆಷ್ಟೋ ಚೇಷ್ಟೆಯ ವಿಡಿಯೋಗಳು ಕೂಡ ವೈರಲ್ ಆಗುತ್ತವೆ. ಇದೀಗ ವಧು-ವರರ ಮೊದಲ ರಾತ್ರಿಯ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
ವಧು-ವರರು ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಆಕಸ್ಮಿಕವಾಗಿ ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿಬಿಟ್ಟಿದೆ. ವಿಡಿಯೋ ರೆಕಾರ್ಡಿಂಗ್ ಸಮಯದಲ್ಲಿ ಲೈವ್ ಬಟನ್ ಒತ್ತಿದ್ದರಿಂದ ಈ ಯಡವಟ್ಟು ಸಂಭವಿಸಿದೆ. ಮದುವೆಯ ವಿಧಿವಿಧಾನಗಳ ನಂತರ ತಮ್ಮ ಕೋಣೆಗೆ ಬಂದ ನವವಿವಾಹಿತ ದಂಪತಿ ದಣಿದಿದ್ದರು. ವಧು ಕ್ಯಾಮೆರಾ ಮುಂದೆ ನಿಂತು ತನ್ನ ಆಭರಣಗಳನ್ನು ತೆಗೆಯಲು ಪ್ರಾರಂಭಿಸುತ್ತಾಳೆ.
ವರ ಆಕೆಗೆ ಸಹಾಯ ಮಾಡುವ ನೆಪದಲ್ಲಿ ರೊಮ್ಯಾನ್ಸ್ ಮಾಡುವ ದೃಶ್ಯ ವಿಡಿಯೋದಲ್ಲಿದೆ. ಇಬ್ಬರೂ ಚುಂಬಿಸಿಕೊಳ್ಳುತ್ತ ಇಬ್ಬರೂ ರೊಮ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರುಷಿ ರಾಹುಲ್ ಅಧಿಕೃತ ಹೆಸರಿನ ಹ್ಯಾಂಡಲ್ನೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಫಸ್ಟ್ ನೈಟ್ ವಿಡಿಯೋಗೆ ತರಹೇವಾರಿ ಕಮೆಂಟ್ಗಳು ಬಂದಿವೆ.