ಎಲೆ ಅಡಿಕೆ ಒಂದು ಆಯರ್ವೇದದ ಔಷಧ. ಅನೇಕ ಸಂದರ್ಭಗಳಲ್ಲಿ ಇದನ್ನು ಬಳಸಲಾಗತ್ತದೆ. ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ ಕೆಲವರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಎಲೆ ಅಡಿಕೆಯಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಮೊದಲ ರಾತ್ರಿ ನವದಂಪತಿ ಶಾರೀರಿಕ ಸಂಬಂಧ ಹೊಂದಿ ಹೊಸ ಬಾಳು ಆರಂಭಿಸಲಿ ಎಂಬ ಕಾರಣಕ್ಕೆ ಪಾನ್ ನೀಡಲಾಗುತ್ತದೆ.
ಬಾಯಿಯಿಂದ ಕೆಟ್ಟ ವಾಸನೆ ಬರುವವರು ಎಲೆ ಅಡಿಕೆ ಅಗೆಯುವುದು ಒಳ್ಳೆಯದು. ಪಾನಿನಲ್ಲಿ ದುರ್ನಾತ ಬೀರುವ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುವ ಶಕ್ತಿ ಇದೆ. ಏಲಕ್ಕಿ, ಲವಂಗ, ದಾಲ್ಚಿನಿ, ಸಕ್ಕರೆ ಮತ್ತು ತೆಂಗಿನ ಕಾಯಿಯ ಜೊತೆಗೆ ಎಲೆ ಅಡಿಕೆ ತಿಂದರೆ ಒಳ್ಳೆಯದು.
ವೀಳ್ಯದೆಲೆ ತಿನ್ನುವವರಿಗೆ ಬಾಯಿ ಕ್ಯಾನ್ಸರ್ ಬರುವುದಿಲ್ಲ. ಆದ್ರೆ ತಂಬಾಕಿನ ಜೊತೆ ವೀಳ್ಯದೆಲೆಯನ್ನು ಸೇವಿಸಬಾರದು. ಅಡಿಕೆ ಜೊತೆ ವೀಳ್ಯದೆಲೆ ತಿಂದರೆ ಬಾಯಿಯಲ್ಲಾಗುವ ಯಾವುದೇ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.
ಎಲೆಯಲ್ಲಿ ಮಧುಮೇಹ ನಿಯಂತ್ರಿಸುವ ಗುಣವಿದೆ. ಅದು ಸಕ್ಕರೆ ಕಾಯಿಲೆ ವಿರುದ್ಧ ಹೋರಾಡುತ್ತದೆ. ಹಾಗಾಗಿ ಮಧುಮೇಹಿಗಳು ಎಲೆ ಅಡಿಕೆ ಅಗೆಯವುದು ಉತ್ತಮ.
ವೀಳ್ಯದೆಲೆ ತಲೆನೋವಿಗೆ ಮದ್ದು. ಗಾಯಕ್ಕೆ ಕೂಡ ವೀಳ್ಯದೆಲೆ ಉತ್ತಮ ಔಷಧಿ. ಅದರ ರಸವನ್ನು ಗಾಯದ ಮೇಲೆ ಹಚ್ಚಿಕೊಳ್ಳಬೇಕು. ದೊಡ್ಡ ಗಾಯಗಳಾಗಿದ್ದರೆ ರಸವನ್ನು ಗಾಯದ ಮೇಲೆ ಹಾಕಿ ಪಟ್ಟಿ ಕಟ್ಟಿಕೊಂಡರೆ ಎರಡು ದಿನದಲ್ಲಿ ಗಾಯ ಮಾಯವಾಗುತ್ತದೆ.