ಕಿರಿಯ ವಯಸ್ಸಿನಲ್ಲೇ ಮೊದಲ ಮುಟ್ಟು ಕಾಣಿಸಿಕೊಂಡ್ರೆ ಪ್ರೌಢಾವಸ್ಥೆಗೆ ಬಂದಮೇಲೂ ಅವರು ದೀರ್ಘಕಾಲದ ನೋವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಅನ್ನೋದು ಹೊಸ ಅಧ್ಯಯನವೊಂದರಲ್ಲಿ ಪತ್ತೆಯಾಗಿದೆ. ‘PAIN’ ಜರ್ನಲ್‌ನಲ್ಲಿ ಅಧ್ಯಯನದ ಆವಿಷ್ಕಾರಗಳನ್ನು ಪ್ರಕಟಿಸಲಾಗಿದೆ.
ವಯಸ್ಸು ಹಾಗೂ ಋತುಚಕ್ರದ ಮಧ್ಯೆ ನೇರವಾದ ಸಂಬಂಧವಿದೆ. ದೀರ್ಘಕಾಲ ಕಾಡುವ ನೋವು ಕೂಡ ಇದನ್ನು ಅವಲಂಬಿಸಿದೆ ಅನ್ನೋದು ವಿಜ್ಞಾನಿಗಳ ಅಭಿಮತ. ಬೇಗನೆ ಋತುಮತಿಯಾದರೆ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುವುದರಿಂದ ನೋವಿಗೆ ಕಾರಣವಾಗಬಹುದು. 12,000 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ಋತುಚಕ್ರ ಆರಂಭವಾದ ವಯಸ್ಸು, ದೀರ್ಘಕಾಲದ ನೋವಿನ ಉಪಸ್ಥಿತಿ ಮತ್ತು ಗುಣಲಕ್ಷಣಗಳ ನಡುವಿನ ಸಂಬಂಧಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಅಧ್ಯಯನದ ಪ್ರಕಾರ ಯುವತಿಯರಲ್ಲಿ ಮುಟ್ಟು ಆರಂಭವಾಗುವ ಸರಾಸರಿ ವಯಸ್ಸು 13. ಸುಮಾರು ಶೇ.40ರಷ್ಟು ಮಹಿಳೆಯರು ದೀರ್ಘಕಾಲದ ನೋವನ್ನು ಅನುಭವಿಸುತ್ತಿರುವುದು ಪತ್ತೆಯಾಗಿದೆ. ಋತುಚಕ್ರ ಒಂದೊಂದು ವರ್ಷ ತಡವಾದಂತೆಯೂ ನೋವಿನ ಪ್ರಮಾಣ ಶೇ.2ರಷ್ಟು ಕಡಿಮೆಯಾಗುತ್ತದೆ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.