ಬಾಲಿವುಡ್‌ನ ಕಾಮಿಡಿ ಕಿಂಗ್ ಜಾನಿ ಲಿವರ್ ತಮ್ಮ ತಮಾಷೆಯ ವಿಡಿಯೋಗಳನ್ನು ಆಗಾಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ, ನಟ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
64 ವರ್ಷದ ಹಾಸ್ಯನಟ ಜಾನಿ ಲಿವರ್, ಮುಂಬೈನ ರೆಸ್ಟೋರೆಂಟ್‌ನಲ್ಲಿ ಮೊದಲ ಬಾರಿಗೆ ಜಪಾನೀಸ್ ಪೇಸ್ಟ್ ವಾಸಾಬಿಯನ್ನು ಪ್ರಯತ್ನಿಸಿದ್ದಾರೆ. ಹೊಸ ಖಾದ್ಯ ಟೇಸ್ಟ್ ಮಾಡಿದಾಗ ಅವರು ನೀಡಿರುವ ಪ್ರತಿಕ್ರಿಯೆ ನೆಟ್ಟಿಗರನ್ನು ನಗಿಸಿದೆ.
ವಿಡಿಯೋದಲ್ಲಿ, ಜಾನಿ ಲಿವರ್ ಮುಂಬೈನ ಕ್ರಿಸೋಲ್ ರೆಸ್ಟೋರೆಂಟ್‌ನಲ್ಲಿ ತನ್ನ ಕುಟುಂಬದೊಂದಿಗೆ ಊಟ ಮಾಡುತ್ತಿದ್ದರು. ಅವರ ಕುಟುಂಬ ವರ್ಗ ಮೊದಲ ಬಾರಿಗೆ ವಸಾಬಿ ಖಾದ್ಯ ರುಚಿ ನೋಡುವಂತೆ ಕೇಳಿಕೊಂಡಿದ್ದಾರೆ. ವಾಸಾಬಿ ರುಚಿ ನೋಡಿದಾಕ್ಷಣ ಜಾನಿ ತಮ್ಮ ಮುಖಭಾವದಲ್ಲಿ ಆಘಾತಗೊಂಡವರಂತೆ, ಕೊಂಚ ಮುಖ ಸಪ್ಪೆ ಮಾಡಿಕೊಂಡಂತೆ ಮಾಡಿದ್ದಾರೆ. ವಾಸಾಬಿ ರುಚಿ ಹೇಗಿತ್ತು ಎಂದು ಕೇಳಿದಾಗ, ಇನ್ನೂ ಆಘಾತದಿಂದ ಚೇತರಿಸಿಕೊಳ್ಳದ ಅವರು ಸುಮ್ಮನೆ ತಲೆಯಾಡಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.
https://www.youtube.com/watch?v=ZoNUd6N9geY