ಪ್ರಸಕ್ತ ಸಾಲಿನ ಐಪಿಎಲ್ ಹರಾಜಿಗೆ ಸಿದ್ಧತೆಗಳು ನಡೆದಿದ್ದು, ಹಲವು ಫ್ರಾಂಚೈಸಿ ತಂಡಗಳು ಸ್ಟಾರ್ ಆಟಗಾರರನ್ನು ದುಬಾರಿ ಬೆಲೆ ತೆತ್ತು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ (15ನೇ ಆವೃತ್ತಿ) ವಿರಾಟ್ ಕೊಹ್ಲಿ ಅವರನ್ನು 15 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದೆ.
ಸುಳ್ಳು ಸುದ್ದಿಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಕೇಂದ್ರದ ತರಾಟೆ
ಇದರ ಮಧ್ಯೆ ವಿರಾಟ್ ಕೊಹ್ಲಿ 2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮನ್ನು ಮೊದಲ ಬಾರಿಗೆ ಬರೋಬ್ಬರಿ $30000 ತೆತ್ತು ಖರೀದಿಸಿದ್ದನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ. ಅಂದು 1 ಡಾಲರ್ಗೆ 26.87 ರೂಪಾಯಿಗಳಿಗೆ ಸಮನಾಗಿದ್ದು ಇಷ್ಟಾದರೂ ಸಹ ಅದು ಅಂದಿನ ದಿನಗಳಿಗೆ ಅತ್ಯಂತ ದುಬಾರಿ ದರ ಎಂದು ಹೇಳಿದ್ದಾರೆ.
ಆ ದಿನಗಳಲ್ಲಿ ಕೊಹ್ಲಿ ಅಂಡರ್ 19 ವಯೋಮಿತಿ ಭಾರತ ತಂಡದ ನಾಯಕರಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ವಿರಾಟ್ ಕೊಹ್ಲಿ ಅವರಿಗೆ $30000 ಹಣ ನೀಡಿದ್ದು, ಇದನ್ನು ತಿಳಿದ ವೇಳೆ ಕೊಹ್ಲಿ ಅವರಿಗೆ ನಂಬಲೇ ಆಗಿರಲಿಲ್ಲವಂತೆ.