alex Certify ಮೊದಲ ಬಾರಿಗೆ ಧ್ವನಿ ಕೇಳಿದ ಮಗುವಿನ ಪ್ರತಿಕ್ರಿಯೆ ಹೀಗಿತ್ತು ನೋಡಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಧ್ವನಿ ಕೇಳಿದ ಮಗುವಿನ ಪ್ರತಿಕ್ರಿಯೆ ಹೀಗಿತ್ತು ನೋಡಿ…

ಇನ್‌ ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿರೋ ವಿಡಿಯೋ ಇದು. ಕಿವಿ ಕೇಳಿಸದ ಮಗು ಮೊದಲ ಬಾರಿಗೆ ಶ್ರವಣ ಸಾಧನವನ್ನು ಪಡೆದಾಗ ಅವನ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೆರೆ ಹಿಡಿಯಲಾಗಿದೆ.

ಕೌಂಟ್‌ ಡೌನ್‌ ಕೊಡುತ್ತ ಎರಡೂ ಕಿವಿಯಲ್ಲಿ ಅಳವಡಿಸಲಾಗಿದ್ದ ಶ್ರವಣ ಸಾಧನವನ್ನು ಆನ್‌ ಮಾಡಲಾಯ್ತು. ಅದೇ ಮೊದಲ ಬಾರಿಗೆ ಧ್ವನಿಯನ್ನು ಆಲಿಸಿದ ಮಗುವಿನ ಮುಖ ಖುಷಿಯಿಂದ ಪ್ರಜ್ವಲಿಸಿತ್ತು.

ತನಗಿನ್ನು ಕಿವಿ ಕೇಳಿಸುತ್ತದೆ ಅನ್ನೋದು ಗೊತ್ತಾಗುತ್ತಿದ್ದಂತೆ ಪುಟಾಣಿ ಭಾವುಕನಾಗಿದ್ದ. ಸಂತೋಷದಿಂದ ಪಕ್ಕದಲ್ಲೇ ಇದ್ದ ತನ್ನ ತಾಯಿಯನ್ನು ತಬ್ಬಿಕೊಂಡಿದ್ದಾನೆ. ಮಗುವಿನ ಹೆತ್ತವರ ಪಾಲಿಗೆ ಕೂಡ ಅತ್ಯಂತ ಹೃದಯಸ್ಪರ್ಷಿ ಹಾಗೂ ಭಾವನಾತ್ಮಕ ಕ್ಷಣವಿದು. 6 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ನುಮುಂದೆ ಮಗು ಕೇವಲ ಒಳ್ಳೆಯ ವಿಷಯವನ್ನೇ ಕೇಳುವಂತಾಗಲಿ ಎಂದು ಹಾರೈಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಮೆಂಟ್‌ ಗಳು ಕೂಡ ಹರಿದು ಬಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...