ಫೆಸಿಫಿಕ್ ದ್ವೀಪ ರಾಷ್ಟ್ರ ಕಿರಿಬಾತಿಯಲ್ಲಿ, ಕಳೆದ ಎರಡು ವಾರಗಳ ಹಿಂದೆ ಕೋವಿಡ್ ವೈರಸ್ನ ಮೊದಲ ಅಲೆ ಶುರುವಾಗಿದೆ. ಎರಡು ವರ್ಷಗಳಿಂದ ಕೊರೋನಾದಿಂದ ಬಚಾವಾಗಿದ್ದ ಪುಟ್ಟ ರಾಷ್ಟ್ರ, ಈಗ ತನ್ನ ಮೊದಲನೆಯ ಅಲೆಯನ್ನು ಎದುರಿಸಲು ಭಾರತದ ಬಳಿ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ಭಾರತವು, ಶನಿವಾರ ಕಿರಿಬಾತಿಗೆ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಿದೆ.
ಭಾರತ ಕಳುಹಿಸಿರುವ ವೈದ್ಯಕೀಯ ಸಹಾಯ ಸಾಮಗ್ರಿಗಳು, ಪಲ್ಸ್ ಆಕ್ಸಿಮೀಟರ್‌ಗಳು, ಪಿಪಿಇ ಕಿಟ್‌ಗಳು ಮತ್ತು ತುರ್ತು ಕೋವಿಡ್ -19 ಔಷಧಿಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಪೆಸಿಫಿಕ್ ಪ್ರದೇಶಕ್ಕೆ ಆರಂಭಿಕ ಪ್ರತಿಕ್ರಿಯೆಯಾಗಿ, ಕಿರಿಬಾತಿಗೆ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡಿರುವುದು, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕೆ, ಬೆಂಬಲ ಒದಗಿಸುವ ಭಾರತದ ಬದ್ಧತೆಯನ್ನು ದೃಢೀಕರಿಸುತ್ತವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಹಿಜಾಬ್ ಸ್ಪರ್ಶಿಸುವವರ ಕೈಗಳನ್ನು ಕತ್ತರಿಸುತ್ತೇವೆ; ವಿವಾದಾತ್ಮಕ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ನಾಯಕಿ..!
ಪ್ರತ್ಯೇಕವಾದ ಪೆಸಿಫಿಕ್ ದ್ವೀಪ ದೇಶವನ್ನು ತಲುಪುವಲ್ಲಿ ಅನೇಕ ವ್ಯವಸ್ಥಾಪನಾ ಸವಾಲುಗಳಿದ್ದವು. ಇದರ ಹೊರತಾಗಿಯೂ, ಭಾರತದಿಂದ ವೈದ್ಯಕೀಯ ಸರಬರಾಜುಗಳನ್ನು ಹೆಚ್ಚು ಪ್ರಮಾಣದಲ್ಲಿ ಮತ್ತು ಕಡಿಮೆ ಸಮಯದಲ್ಲಿ ರವಾನಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯನ್ ಸರ್ಕಾರ ಸಂಯೋಜಿಸಿದ ವಿಮಾನದಲ್ಲಿ ಭಾರತ ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಶನಿವಾರ ರವಾನೆಯಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸವಾಲುಗಳನ್ನು ತಗ್ಗಿಸಲು ಮತ್ತು ಎದುರಿಸಲು ಕಿರಿಬಾತಿಯ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಭಾರತವು ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.