ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವವರು ಶಿಕ್ಷಕರು. ಆದ್ರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ದಾರಿ ತಪ್ಪುತ್ತಿದ್ದಾರೆ. ಅಮೆರಿಕಾದಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿದ ಶಿಕ್ಷಕಿ, ಕಾರಿನಲ್ಲಿ ಸಂಬಂಧ ಬೆಳೆಸಿದ್ದಾಳೆ.
ವರದಿ ಪ್ರಕಾರ, ಈ ಘಟನೆ ಅಮೆರಿಕದ ಮಿಸೌರಿಯಲ್ಲಿ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ, ವಿದ್ಯಾರ್ಥಿಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾಳೆ. ವಿಷಯ ಬೆಳಕಿಗೆ ಬಂದ ನಂತರ ಶಾಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಇಡೀ ಶಾಲೆಯಲ್ಲಿ ಕೋಲಾಹಲ ಉಂಟಾಯಿತು. ಶಿಕ್ಷಕಿಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲೆ, ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಿದೆ.
ವರದಿಯ ಪ್ರಕಾರ, ಶಿಕ್ಷಕಿ ನಗ್ನ ಫೋಟೋವನ್ನು ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ನಂತ್ರ ಕಾರಿನಲ್ಲಿ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ದಾಳೆ. ವಿಷ್ಯ ಗೊತ್ತಾಗ್ತಿದ್ದಂತೆ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
ವಿಚಾರಣೆ ವೇಳೆ ವಿದ್ಯಾರ್ಥಿ ವಿಷ್ಯ ಬಾಯ್ಬಿಟ್ಟಿದ್ದಾನೆ. ಮೊದಲು ಶಿಕ್ಷಕಿ ನಗ್ನ ಫೋಟೋ ಕಳುಹಿಸಿದ್ದಾಳೆ. ನಂತ್ರ ಕೆಟ್ಟ ಸಂದೇಶ ಕಳುಹಿಸಿದ್ದಾಳೆ. ನದಿಯ ದಡದಲ್ಲಿ ಕಾರಿನಲ್ಲಿ ಶಿಕ್ಷಕಿ ತನ್ನೊಂದಿಗೆ ಸಂಬಂಧ ಬೆಳೆಸಿದ್ದಾಳೆಂದು ವಿದ್ಯಾರ್ಥಿ ಹೇಳಿದ್ದಾನೆ.ಶಿಕ್ಷಕಿ ಮದ್ಯ ಸೇವನೆ ಮಾಡಿದ್ದಲ್ಲದೆ, ವಿದ್ಯಾರ್ಥಿಗೆ ಮದ್ಯ ಸೇವಿಸುವಂತೆ ಹೇಳಿದ್ದಳಂತೆ. ಆದ್ರೆ ವಿದ್ಯಾರ್ಥಿ ಮದ್ಯ ಸೇವನೆ ಮಾಡಿರಲಿಲ್ಲವಂತೆ.
ಘಟನೆ ಮೂರು ವರ್ಷಗಳ ಹಿಂದೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ತೀರ್ಪು ನೀಡಿದೆ. ಶಿಕ್ಷಕಿ ಮೂರು ವಿದ್ಯಾರ್ಥಿಗಳ ಜೊತೆ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ಶಿಕ್ಷಕಕಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.