ಹದಿಹರಯಕ್ಕೆ ಕಾಲಿಟ್ರಿ ಅಂದ್ರೆ ಸಾಕು ಮೊಡವೆ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಎಲ್ಲರನ್ನ ಕಾಡುತ್ತೆ. ಅದ್ರಲ್ಲೂ ಮೊಡವೆಯಿಂದ ಮುಖದ ಮೇಲೆ ಕಲೆ ನಿತ್ರಂತೂ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತೆ. ಆದ್ರೆ ನಿಮ್ಮ ಮನೆಯಲ್ಲೇ ಇರುವ ಪದಾರ್ಥಗಳನ್ನ ಬಳಸಿ ನೀವು ಈ ಸಮಸ್ಯೆಯಿಂದ ಪಾರಗಬಹುದಾಗಿದೆ.
ಬೆಳ್ಳುಳ್ಳಿ ಎಲ್ಲರ ಮನೆಯಲ್ಲೂ ಇರುವಂತಹ ಅಡುಗೆ ಪದಾರ್ಥ. ಇದು ನಿಮ್ಮ ಮುಖದಲ್ಲಿನ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಬೆಳ್ಳುಳ್ಳಿಯ ಸರಿಯಾದ ಉಪಯೋಗದಿಂದ ಮೊಡವೆ ಸಮಸ್ಯೆ ನಿವಾರಣೆ ಆಗೋದ್ರ ಜೊತೆಗೆ ಮುಖದ ಕಾಂತಿಯೂ ಹೆಚ್ಚುತ್ತದೆ.
ಬೆಳ್ಳುಳ್ಳಿ ರಸವನ್ನ ತೆಗೆದು ಮೊಡವೆ ಮೂಡಿದ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ. ಬಳಿಕ ತಣ್ಣೀರಿನಲ್ಲಿ ಮುಖವನ್ನ ತೊಳೆಯಿರಿ. ದಿನಕ್ಕೆ ಒಂದು ಬಾರಿ ಈ ರೀತಿ ಮಾಡೋದ್ರಿಂದ ಕೇವಲ ಎರಡು ದಿನದಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗೋದ್ರಲ್ಲಿ ಸಂಶಯವೇ ಇಲ್ಲ.
ಸೊರಿಯಾಸಿಸ್ ಕೂಡ ಚರ್ಮದ ಪ್ರಮುಖ ಸಮಸ್ಯೆಗಳಲ್ಲೊಂದು. ಬೇಸಿಗೆ ಹೆಚ್ಚಾದ ಕಾಲದಲ್ಲಿ ಸೊರಿಯಾಸಿಸ್ ಸಮಸ್ಯೆ ಜಾಸ್ತಿಯಾಗುತ್ತೆ. ಈ ಸಮಸ್ಯೆಗೂ ಬೆಳ್ಳುಳ್ಳಿ ಉತ್ತಮ ಫಲಿತಾಂಶ ನೀಡಬಲ್ಲದು. ಬೆಳ್ಳುಳ್ಳಿ ರಸವನ್ನ ಸೋರಿಯಾಸಿಸ್ ಉಂಟಾದ ಜಾಗದಲ್ಲಿ ಹಾಕಿಕೊಳ್ಳಿ. ಈ ರೀತಿ ಮಾಡೋದ್ರಿಂದ ನಿಮಗೆ ಚರ್ಮ ಉರಿಯಾದ ಅನುಭವ ಉಂಟಾಗಬಹುದು. ಆದರೆ ಬೆಳ್ಳುಳ್ಳಿ ರಸಕ್ಕೆ ಕೀಟಾಣುಗಳನ್ನ ಹೊಡೆದೋಡಿಸೋ ಸಾಮರ್ಥ್ಯವಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ನಿಮ್ಮ ಸೋರಿಯಾಸಿಸ್ ಸಮಸ್ಯೆ ದೂರವಾಗಲಿದೆ.
ಬಿಳಿ ಬಣ್ಣದ ಚರ್ಮ ಹೊಂದಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಇದಕ್ಕಾಗಿ ಅನೇಕ ಔಷಧಿಗಳನ್ನ ಪ್ರಯೋಗ ಮಾಡಿಯೂ ಇರಬಹುದು. ಆದರೆ ಕೇವಲ ಒಂದು ಬೆಳ್ಳುಳ್ಳಿ ನಿಮ್ಮ ಈ ಸಮಸ್ಯೆಗೂ ಪರಿಹಾರ ನೀಡಬಲ್ಲದು. ಬೆಳ್ಳುಳ್ಳಿ ಪೇಸ್ಟ್ನ್ನ ಹಳದಿ ಹಾಗೂ ನಿಂಬು ರಸದಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ದಿನದಲ್ಲಿ ಕೇವಲ ಒಂದು ಬಾರಿ ಈ ರೀತಿ ಮಾಡೋದ್ರಿಂದ ನಿಮ್ಮ ಮುಖದ ಅಂದ ಹೆಚ್ಚಾಗೋದ್ರಲ್ಲಿ ಸಂದೇಹವೇ ಇಲ್ಲ.
ಕೇವಲ ಮುಖದ ಅಂದ ಹೆಚ್ಚಿಸೋಕೆ ಮಾತ್ರವಲ್ಲ. ಬಲಿಷ್ಠ ಕೂದಲನ್ನ ಪಡೀಬೇಕು ಅಂದ್ರೂನು ಬೆಳ್ಳುಳ್ಳಿಯ ಬಳಕೆ ಅಗತ್ಯ. ನಿಮ್ಮ ಕೂದಲಿಗೆ ವಾರದಲ್ಲಿ ಕೇವಲ ಒಂದು ದಿನ ಬೆಳ್ಳುಳ್ಳಿಯಿಂದ ಆರೈಕೆ ಮಾಡಿದ್ರೆ ನಿಮ್ಮ ಕೂದಲು ಬಲಿಷ್ಠ , ಉದ್ದ ಹಾಗೂ ರೇಷ್ಮೆಯಂತೆ ಕಂಗೊಳಿಸಲಿದೆ. ಮೊಟ್ಟೆ, ಮೊಸರಿನ ಜೊತೆ ಬೆಳ್ಳುಳ್ಳಿ ಪೇಸ್ಟ್ ಬೆರಸಿ ಹಚ್ಚಿಕೊಳ್ಳಿ. ಕೂದಲನ್ನ ಬಲಿಷ್ಟ ಮಾಡೋಕೆ ಇದಕ್ಕಿಂತ ಒಳ್ಳೆ ಕಂಡಿಷನರ್ ಎಲ್ಲೂ ಸಿಗಲಿಕ್ಕಿಲ್ಲ.