ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಆಲ್ಕೋಹಾಲ್ ಮೊಡವೆ ಬೇಗ ಒಣಗಲು ಸಹಾಯ ಮಾಡುತ್ತದೆ. ಆದ್ರೆ ಇದ್ರಿಂದ ಸಾಕಷ್ಟು ದುಷ್ಪರಿಣಾಮವಿದೆ ಎನ್ನುತ್ತಾರೆ ತಜ್ಞರು.
ಟೂತ್ ಪೇಸ್ಟ್ ನಲ್ಲಿರುವ ಟ್ರೆಕ್ಲೋಸಿಸ್ ಮೊಡವೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಸಾಯಿಸುತ್ತದೆ. ಆದ್ರಿಂದ ಮೊಡವೆ ಬೇಗ ಕಡಿಮೆಯಾಗುತ್ತದೆ. ಆದ್ರೆ ಟೂತ್ ಪೇಸ್ಟ್ ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ತುರಿಕೆ, ಉರಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಮೊಡವೆಗೆ ಟೂತ್ ಪೇಸ್ಟ್ ಹಚ್ಚುವುದ್ರಿಂದ ಮುಖ ಶುಷ್ಕವಾಗಿ ಕಾಂತಿ ಕಳೆದುಕೊಳ್ಳುತ್ತದೆ.
ಮೊಡವೆಗೆ ಟೂತ್ ಪೇಸ್ಟ್ ಹಚ್ಚಿ ಬೇಗ ಗುಣಮಾಡಿಕೊಳ್ಳುವ ಆತುರದಲ್ಲಿ ಇನ್ನೊಂದು ಯಡವಟ್ಟು ಮಾಡಿಕೊಳ್ತೇವೆ. ಮುಖದ ಮೇಲೆ ಮೊಡವೆ ಗುರುತು ಹಾಗೆ ಉಳಿದು ಬಿಡುತ್ತದೆ.
ಮೊಡವೆಗೆ ಟೂತ್ ಪೇಸ್ಟ್ ಹಚ್ಚುವ ಅಭ್ಯಾಸವಿದ್ದರೆ ಈಗ್ಲೇ ಬಿಟ್ಟು ಬಿಡಿ. ಅಗತ್ಯವೆನಿಸಿದ್ರೆ ಬಿಳಿ ಬಣ್ಣದ ಟೂತ್ ಪೇಸ್ಟ್ ಮಾತ್ರ ಬಳಸಿ. ಬಣ್ಣ ಹಾಕಿರುವ ಯಾವುದೇ ಟೂತ್ ಪೇಸ್ಟ್ ಬಳಸಬೇಡಿ.