ಮೊಟ್ಟೆಯಿಂದ ಆಮ್ಲೇಟ್ ತಯಾರಿಸಿದ ಬಳಿಕ ಅದರ ಸಿಪ್ಪೆಯನ್ನು ಕಸದ ಡಬ್ಬಿಗೆ ಎಸೆಯುತ್ತೀರಾ, ಅದಕ್ಕೂ ಮುನ್ನ ಇಲ್ಲಿ ಕೇಳಿ. ಇದು ನಿಮ್ಮ ಫಸ್ಟ್ ಏಯ್ಡ್ ಬಾಕ್ಸಿಗೆ ಪ್ರಯೋಜನವಾಗಬಹುದು. ಇದರ ಬಿಳಿ ಪದರ ಸಣ್ಣ ಗಾಯ, ಗೀರು ಅಥವಾ ರಕ್ತಸ್ರಾವವಾದರೆ ಬ್ಯಾಂಡೇಜ್ ಅಗಿ ಕೆಲಸ ಮಾಡುತ್ತದೆ.
ಈ ಮೊಟ್ಟೆಯ ಹೊರಭಾಗವನ್ನು ಪುಡಿ ಮಾಡಿ ಆ್ಯಪಲ್ ಸೈಡ್ ವಿನೆಗರ್ ಸೇರಿಸಿಡಿ. ಐದು ದಿನಗಳ ಬಳಿಕ ಇದನ್ನು ನಿಮ್ಮ ತ್ವಚೆಯ ಮೇಲೆ ಹಚ್ಚಿ. ವಾರಕ್ಕೆರಡು ಬಾರಿ ಇದನ್ನು ಮಾಡುವುದರಿಂದ ನಿಮ್ಮ ಮುಖ ಸ್ವಚ್ಛವಾಗುತ್ತದೆ.
ಈ ಸಿಪ್ಪೆಯನ್ನು ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ. ಹಲ್ಲುಜ್ಜುವ ಮೊದಲು ಇದನ್ನು ಹಲ್ಲಿಗೆ ತಿಕ್ಕಿ. ಥರ್ಮಾಸ್ ಪ್ಲಾಸ್ಕ್ ತೊಳೆಯಲು ಇದನ್ನು ಬಳಸಬಹುದು. ಮೊಟ್ಟೆಯ ಚಿಪ್ಪುಗಳನ್ನು ಥರ್ಮಾಸ್ ಪ್ಲಾಸ್ಕ್ ದೊಳಗೆ ಉದುರಿಸಿ. ಚೆನ್ನಾಗಿ ಕುಲುಕಿ. ಬಿಸಿ ನೀರು ಸೇರಿಸಿ ಮತ್ತೆ ಅಲುಗಾಡಿಸಿ. ಇದರಿಂದ ಬಾಟಲ್ ಸ್ವಚ್ಛವಾಗುತ್ತದೆ.
ಮೊಟ್ಟೆಯ ಚಿಪ್ಪಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು ಗಿಡಗಳಿಗೆ ಗೊಬ್ಬರವಾಗಿಯೂ ಬಳಸುತ್ತಾರೆ. ಇದನ್ನು ಸಿಂಕ್ ನಲ್ಲಿ ಹಾಕಿ ಇಟ್ಟುಕೊಳ್ಳುವುದರಿಂದ ಆಹಾರದ ದೊಡ್ಡ ತುಣುಕುಗಳು ಸಿಂಕ್ ಒಳಗೆ ಇಳಿಯದಂತೆ ನೋಡಿಕೊಳ್ಳುತ್ತವೆ.