ಡಯೆಟ್, ವರ್ಕೌಟ್ ಮಾಡುವವರು ಹಾಗೇ ಮೊಟ್ಟೆ ಪ್ರಿಯರು ಮನೆಯಲ್ಲಿ ಮೊಟ್ಟೆ ಬೇಯಿಸಿಕೊಂಡು ತಿನ್ನುತ್ತಿರುತ್ತಾರೆ. ಸಾಮಾನ್ಯವಾಗಿ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಮೊಟ್ಟೆ ಬೇಯಿಸುತ್ತೇವೆ. ಇದರಿಂದ ಸಮಯ ಕೂಡ ಹೆಚ್ಚು ಬೇಕಾಗುತ್ತದೆ ಜತೆಗೆ ಗ್ಯಾಸ್ ಬೇರೆ ಖರ್ಚು. ನಿಮ್ಮನೆಯಲ್ಲಿ ಇಲೆಕ್ಟ್ರಿಕ್ ಕೆಟಲ್ ಇದ್ದರೆ ಸುಲಭವಾಗಿ ಅದರಲ್ಲಿ ಮೊಟ್ಟೆ ಬೇಯಿಸಿಕೊಂಡು ತಿನ್ನಬಹುದು.
ಇಲೆಕ್ಟ್ರಿಕ್ ಕೆಟಲ್ ಗೆ ಮೊಟ್ಟೆ ಹಾಕಿ ನಂತರ ಮೊಟ್ಟೆ ಮುಳುಗುವಷ್ಟು ನೀರು ಹಾಕಿ ಸ್ವಿಚ್ ಆನ್ ಮಾಡಿ. ಇದರಲ್ಲಿನ ನೀರು ಚೆನ್ನಾಗಿ ಕುದಿದು 5 ನಿಮಿಷಗಳ ನಂತರ ತನ್ನಿಂದ ತಾನೇ ಆಫ್ ಆಗುತ್ತದೆ. ಕೆಟಲ್ ಆಫ್ ಆದ ತಕ್ಷಣ ತೆಗೆಯಬೇಡಿ.
10 ನಿಮಿಷಗಳ ಕಾಲ ಮೊಟ್ಟೆ ಆ ನೀರಿನಲ್ಲಿಯೇ ಇರಲಿ. ಇದರಿಂದ ಮೊಟ್ಟೆ ಪೂರ್ತಿಯಾಗಿ ಬೇಯುತ್ತದೆ. ಇನ್ನು ಹಾಫ್ ಬಾಯಲ್ ಬೇಕೆನ್ನುವವರು ಕೆಟಲ್ ಆಫ್ ಆದ ತಕ್ಷಣ ತೆಗೆಯಿರಿ.