ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಸಸ್ಯಾಹಾರಿಗಳಿಗೂ ಮೊಟ್ಟೆ ಸೇವಿಸುವಂತೆ ವೈದ್ಯರು ಸೂಚಿಸುವುದೇ ಇದಕ್ಕೆ ಸಾಕ್ಷಿ. ಇದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದೇಹಕ್ಕೆ ಅವಶ್ಯಕವಾದ ಕೊಬ್ಬನ್ನೇ ನೀಡುತ್ತದೆ.
ಮೊಟ್ಟೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ. ಕಣ್ಣಿನ ಪೊರೆಯಂತಹ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ.
ಮೊಟ್ಟೆಯಿಂದ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು, ಪ್ರೊಟೀನ್ ಗಳು ಲಭಿಸುತ್ತವೆ. ಇವು ರಕ್ತದೊತ್ತಡ ನಿಯಂತ್ರಣಕ್ಕೆ, ಮೂಳೆಗಳನ್ನು ಬಲಿಷ್ಟಗೊಳಿಸಲು ಸಹಕಾರಿ.
ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಿದರೆ ಬಹಳ ಹೊತ್ತು ಹಸಿವಿನ ಅನುಭವ ಆಗುವುದಿಲ್ಲ. ಇದರಲ್ಲಿರುವ ಪ್ರೊಟೀನ್ ಗಳು ಇದಕ್ಕೆ ಕಾರಣ. ದೇಹ ತೂಕ ಇಳಿಸಲು ಯೋಜನೆ ರೂಪಿಸುವವರಿಗೆ ಇದು ಅತ್ಯುತ್ತಮ ಆಹಾರ.
ಅದರೊಂದಿಗೆ ನಮ್ಮ ದೇಹದ ಬಹುಮುಖ್ಯ ಭಾಗ ಮೆದುಳಿನ ಆರೋಗ್ಯವನ್ನು ಇದು ಕಾಪಾಡುತ್ತದೆ.