ಮೊಟ್ಟೆಯಲ್ಲಿ ಎಲ್ಲಿ ಹೇಗೆ ಸಂಗ್ರಹಿಸಿಡಬಹುದು ಎಂಬುದು ಬಹುತೇಕರಿಗೆ ತಲೆನೋವು ತರುವ ಸಂಗತಿ. ಸಾಮಾನ್ಯವಾಗಿ ಇದನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಡುತ್ತೇವೆ. ಇದರಿಂದ ಮೊಟ್ಟೆಯನ್ನು ಸಾಧಾರಣ ತಾಪಮಾನದಲ್ಲಿ ಸಂಗ್ರಹಿಸಿಡುವುದೇ ಒಳ್ಳೆಯದು.
ಪದೇ ಪದೇ ಫ್ರಿಜ್ ಬಾಗಿಲನ್ನು ತೆಗೆದು ಹಾಕುವುದರಿಂದ ಮೊಟ್ಟೆಗಳ ಗುಣಮಟ್ಟ ಹಾಳಾಗುತ್ತದೆ. ನೀವು ಮೊಟ್ಟೆಯನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೂ ಬಳಸುವ ಮುನ್ನ ನೈಸರ್ಗಿಕ ತಾಪಮಾನಕ್ಕೆ ಒಗ್ಗಿಕೊಳ್ಳುವ ತನಕ ಅಂದರೆ ಕನಿಷ್ಠ ಎರಡು ಗಂಟೆ ಹೊತ್ತು ಅದನ್ನು ಹೊರಗಿಡಿ.
ಮೊಟ್ಟೆಯನ್ನು ಮನೆಗೆ ತರುವಾಗ ಯಾವ ರೀತಿ ಪ್ಯಾಕೇಜಿಂಗ್ ಮಾಡಿರುತ್ತಾರೋ ಅದೇ ರೀತಿ ಅದನ್ನು ಸಂಗ್ರಹಿಸಿಡುವುದು ಒಳ್ಳೆಯದು.
ಬೇಯಿಸಿದ ಮೊಟ್ಟೆಯನ್ನು ಫ್ರಿಜ್ ನಲ್ಲಿ ಇಡುವಾಗ ಗಾಳಿಯಾಡದ ಮುಚ್ಚಳ ಇರುವ ಡಬ್ಬವನ್ನೇ ಆಯ್ಕೆ ಮಾಡಿ. ಮೊಟ್ಟೆಗೆ 40 ಡಿಗ್ರಿ ತಾಪಮಾನ ಬೇಕಾಗುತ್ತದೆ. ಹಾಗಾಗಿ ಫ್ರಿಜ್ ನಲ್ಲಿ ಮಧ್ಯಭಾಗದಲ್ಲಿ ಇಡುವುದು ಒಳ್ಳೆಯದು.