ಮೊಟ್ಟೆಯ ಬಿಳಿಭಾಗ ತೂಕ ಇಳಿಸಲು ನೆರವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಉಳಿದ ಹಳದಿ ಭಾಗವನ್ನು ಬಳಸದೆ ಎಸೆಯುತ್ತೀರಾ?
ಬೇಡ. ಅದನ್ನು ಆಹಾರ ರೂಪದಲ್ಲಿ ಅಂದರೆ ಬೇಯಿಸಿ ತಿನ್ನಿ. ಅದರಲ್ಲಿರುವ ಕೊಲೆಸ್ಟ್ರಾಲ್ ದೇಹಕ್ಕೆ ಅಗತ್ಯವಿರುವ ಅಂಶಗಳನ್ನು ಒದಗಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ.
ಮೊಟ್ಟೆಯ ಹಳದಿ ಭಾಗದಲ್ಲಿ ಕಬ್ಬಿಣ, ವಿಟಮಿನ್ ಬಿ2 ಮತ್ತಿತರ ಅಂಶಗಳಿದ್ದು ಇದನ್ನು ಸೇವಿಸದೆ ಇದ್ದಲ್ಲಿ ಹಲವು ಪೋಷಕಾಂಶಗಳು ನಿಮ್ಮ ದೇಹಕ್ಕೆ ಲಭಿಸುವುದೇ ಇಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಮೊಟ್ಟೆಯ ಹಳದಿ ಭಾಗದ ಸೇವನೆಯಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದಿದೆ.
ನೀವು ದೇಹ ತೂಕವನ್ನು ಇಳಿಸುವ ವ್ಯಾಯಾಮ ಹಾಗು ಡಯಟ್ ನ ಮೊರೆ ಹೋಗಿದ್ದರೂ ತಜ್ಞರ ಅಭಿಪ್ರಾಯ ಪಡೆದು ಮೊಟ್ಟೆ ಸೇವಿಸಿ. ಪೋಷಕಾಂಶ ಭರಿತವಾದ ಹಳದಿ ಭಾಗವನ್ನು ಎಸೆಯದೆ ಬಳಸಿ.