ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಜಿಮ್ ಮಾಡುವವರು ಬೇಯಿಸಿದ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಇದೇ ಕಾರಣ. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುತ್ತಾರೆ. ವಿಶೇಷವಾಗಿ ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. ಹಸಿ ಮೊಟ್ಟೆಗಳನ್ನು ಬೇಯಿಸಿದ ರೀತಿಯಲ್ಲೇ ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಹಸಿ ಮಾಡಬಹುದು. ಇಂಥದ್ದೊಂದು ಅಚ್ಚರಿಯ ಆವಿಷ್ಕಾರವೀಗ ಗಮನಸೆಳೆಯುತ್ತಿದೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಮೊಟ್ಟೆಯನ್ನು ಬೇಯಿಸಿದಾಗ ಅದರೊಳಗಿನ ದ್ರವ ವಸ್ತು ಗಟ್ಟಿಯಾಗುತ್ತದೆ. ಆದರೆ ಅದನ್ನು ಮತ್ತೆ ಕಚ್ಚಾ ಮಾಡುವುದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ. ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಹಸಿ ಮಾಡಬಹುದು ಎಂಬುದನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜನರಲ್ ಮೆಡಿಕಲ್ ಸೈನ್ಸಸ್ ಮತ್ತು ಅಮೆರಿಕದ ಸಂಶೋಧನಾ ಮಂಡಳಿ ಸಂಶೋಧಿಸಿದೆ. ಈ ಮೂಲಕ ಜಗತ್ತಿಗೆ ಆಶ್ಚರ್ಯಕರ ಸಂಗತಿಯೊಂದನ್ನು ತಿಳಿಸಿಕೊಟ್ಟಿದೆ.
ವಿಜ್ಞಾನಿಗಳು ಇದನ್ನು ಯೂರಿಯಾದ ಸಹಾಯದಿಂದ ಮಾಡಿದ್ದಾರೆ. ಯೂರಿಯಾದ ಸಹಾಯದಿಂದ ವಿಜ್ಞಾನಿಗಳು ಘನೀಕರಿಸಿದ ಮೊಟ್ಟೆಯ ಪ್ರೋಟೀನ್ ಅನ್ನು ಅದರ ಹಿಂದಿನ ಸ್ಥಿತಿಗೆ ತಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯೂರಿಯಾದ ಜೊತೆಗೆ ಹೆಚ್ಚಿನ ಸಾಮರ್ಥ್ಯದ ಸುಳಿಯ ದ್ರವ ಯಂತ್ರದ ಅಗತ್ಯವೂ ಇತ್ತು.