ಮನುಷ್ಯನಿಗೂ ನಾಗರಹಾವಿಗೆ ಅದೇನೋ ಜನುಮ ಜನುಮದ ಸಂಬಂಧವಿದೆ. ಹಾವನ್ನು ಕಂಡರೆ ಬಹುತೇಕ ಎಲ್ಲರೂ ಭಯಭೀತರಾದರೂ ಹಾವಿನ ಇತಿಹಾಸ ಕೆದಕಿದಾಗ ಭಾರತೀಯ ಸಂಪ್ರದಾಯದಲ್ಲಿ ಮನುಷ್ಯನ ಜೀವನದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. ಇದೇ ಕಾರಣಕ್ಕೆ ಹಾವಿನಿಂದ ಮನುಷ್ಯನಾಗುವುದು, ಮನುಷ್ಯ ಹಾವಾಗುವ ಘಟನೆಗಳನ್ನು ಸಿನಿಮಾ, ಧಾರಾವಾಹಿಗಳಲ್ಲಿ ನೋಡುತ್ತಲೇ ಇರುತ್ತೇವೆ.
ಅದೇ ರೀತಿ ಹಾವಿನ ನೃತ್ಯಕ್ಕೂ ಮನುಷ್ಯನಿಗೂ ಸಂಬಂಧ ಕಲ್ಪಿಸಲಾಗಿದೆ. ಪುಂಗಿಯ ನಾದಕ್ಕೆ ಹಾವಿನಂತೆ ನರ್ತಿಸುವವರು ಅನೇಕ ಮಂದಿ ಇದ್ದಾರೆ. ಕೆಲವರು ತಾವೇ ನಾಗರಹಾವು ಎಂದು ಕಲ್ಪಿಸಿಕೊಂಡು ನೃತ್ಯ ಮಾಡಿದರೆ, ಇನ್ನು ಹಲವರು ತಮಾಷೆಗಾಗಿ ಈ ನಾಗನೃತ್ಯವನ್ನು ಮಾಡುವುದುಂಟು.
ಅದರಲ್ಲಿಯೂ ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಮದುವೆ ಮೆರವಣಿಗೆಗಳಲ್ಲಿ ನೃತ್ಯ ಮಾಡುವ ಭಾರತೀಯ ಪುರುಷರು ನಾಗಿನ್ ನೃತ್ಯದ ಬಗ್ಗೆ ವಿಚಿತ್ರವಾದ ಗೀಳನ್ನು ಹೊಂದಿರುತ್ತಾರೆ ಎಂದೇ ಹೇಳಲಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಮದುವೆಯ ಮೆರವಣಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ತಾನೇ ನಾಗರಹಾವು ಎಂದು ಕಲ್ಪಿಸಿಕೊಂಡು ನೃತ್ಯ ಮಾಡುತ್ತಿದ್ದಾನೆ. ಆತನನ್ನು ಕಂಟ್ರೋಲ್ ಮಾಡಲು ಆತನ ಸ್ನೇಹಿತ ಪ್ರಯತ್ನಿಸಿದರೂ ಪ್ರಯೋಜನ ಆಗದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ನಕ್ಕು ನಗಿಸುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ ‘official_viralclips’ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಕಂಠಪೂರ್ತಿ ಕುಡಿದು ನೃತ್ಯ ಮಾಡುತ್ತಿರುವುದಾಗಿ ಹಲವರು ಕಮೆಂಟ್ ಮಾಡಿದ್ದಾರೆ. ಮೈಮೇಲೆ ಬಂದಿದ್ದು ಹಾವಲ್ಲ, ಬದಲಿಗೆ ಅದು ಮದ್ಯದ ಎಫೆಕ್ಟ್ ಎನ್ನುತ್ತಿದ್ದಾರೆ ನೆಟ್ಟಿಗರು.