ಧರ್ಮ ಗ್ರಂಥಗಳಲ್ಲಿ ಮನೆ ಗೋಡೆ ಮೇಲಿರುವ ಹಲ್ಲಿಗಳಿಗೂ ಮಹತ್ವ ನೀಡಲಾಗಿದೆ.
ಗೋಡೆ ಮೇಲಿರುವ ಹಲ್ಲಿ ಕೂಗಿದ್ರೆ ಯಾವ ಸಂಕೇತ, ಮೈ ಮೇಲೆ ಬಿದ್ರೆ ಯಾವುದರ ಮುನ್ಸೂಚನೆ ಎಂಬುದನ್ನೆಲ್ಲ ಹೇಳಲಾಗಿದೆ. ಹಲ್ಲಿ ದೇಹದ ಕೆಲ ಭಾಗಗಳಲ್ಲಿ ಬಿದ್ರೆ ಶುಭ. ಮತ್ತೆ ಕೆಲ ಭಾಗಗಳಲ್ಲಿ ಬಿದ್ರೆ ಅಶುಭ.
ಬಲ ಕಾಲಿನ ಮೇಲೆ ಹಲ್ಲಿ ಬಿದ್ರೆ ಶುಭ ಸಂಕೇತವಂತೆ. ಎಡ ಕಾಲಿನ ಮೇಲೆ ಹಲ್ಲಿ ಬಿದ್ರೆ ಅಶುಭ ಸಂಕೇತ. ಹಲ್ಲಿ ಬಲ ಕಾಲಿನ ಮೇಲೆ ಬಿದ್ರೆ ಪ್ರವಾಸಕ್ಕೆ ಹೋಗುವ ಯೋಗವಿದೆ ಎಂದರ್ಥ.
ಇದು ಸುಖ, ಸಂಪತ್ತಿನ ಪ್ರಾಪ್ತಿ ಬಗ್ಗೆಯೂ ಸಂಕೇತ ನೀಡುತ್ತದೆ. ಎಡ ಕಾಲಿನ ಮೇಲೆ ಹಲ್ಲಿ ಬಿದ್ರೆ ಮನೆಯಲ್ಲಿ ಗಲಾಟೆ ನಡೆಯುತ್ತದೆ. ಅನಾರೋಗ್ಯ ಕಾಡುವ ಸಾಧ್ಯತೆಯಿರುತ್ತದೆ. ನೌಕರಿ, ಉದ್ಯೋಗದಲ್ಲಿ ಹಾನಿಯಾಗುವ ಸಾಧ್ಯತೆಯಿರುತ್ತದೆ.
ಹುಬ್ಬುಗಳ ಮೇಲೆ ಹಲ್ಲಿ ಬಿದ್ರೆ ಆರ್ಥಿಕ ನಷ್ಟವುಂಟಾಗುತ್ತದೆಯಂತೆ.
ಬಲ ಕಿವಿ ಮೇಲೆ ಹಲ್ಲಿ ಬಿದ್ರೆ ಬಂಗಾರ ಸಿಗಲಿದೆ ಎಂದರ್ಥ. ಎಡ ಕಿವಿ ಮೇಲೆ ಹಲ್ಲಿ ಬಿದ್ರೆ ಸಂಪತ್ತಿನಲ್ಲಿ ವೃದ್ಧಿಯಾಗಲಿದೆ.
ಮೂಗಿನ ಮೇಲೆ ಹಲ್ಲಿ ಬಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆ. ಶೀಘ್ರವೇ ನೀವು ಧನವಂತರಾಗಲಿದ್ದೀರಿ.
ಮುಖದ ಮೇಲೆ ಹಲ್ಲಿ ಬಿದ್ರೆ ಸ್ವಾದಿಷ್ಟ ಊಟ ನಿಮಗೆ ಸಿಗಲಿದೆ ಎಂಬುದರ ಸಂಕೇತ.