ಅಕಾಲಿಕ ಮಳೆಯಿಂದ ತಡವಾಗಿ ಆರಂಭವಾಗಿರೋ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದಕ್ಷಿಣ ಒಳಭಾಗ ಹಾಗೂ ಬಯಲು ಸೀಮೆಯಲ್ಲಿ ತಾಪದ ಮಟ್ಟ ಗಣನೀಯ ಇಳಿಕೆ ಕಂಡಿದೆ. ತಾಪಮಾನದಲ್ಲಿ 85 ವರ್ಷಗಳಿಂದೀಚೆಗೆ ಎಂದು ಕಂಡಿರದ ಇಳಿಕೆ ಬೀದರ್ ನಲ್ಲಿ ದಾಖಲಾಗಿದ್ದು ಸೋಮವಾರ 9.7 ಡಿಗ್ರಿ ಸೆಲ್ಸಿಯಸ್, ಮಂಗಳವಾರ 9.4 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ.
1936ರಲ್ಲಿ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನದ ಪ್ರಮಾಣ ಕನಿಷ್ಟ ಎಂದು ಗುರುತಿಸಲಾಗಿತ್ತು. ಡಿಸೆಂಬರ್ 20 ಮತ್ತು 21 ರ ಮುಂಜಾನೆ ವೇಳೆ ಕನಿಷ್ಟ ತಾಪಮಾನ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಸಂದರ್ಭದಲ್ಲಿ ಕೇವಲ ಬೀದರ್ ಮಾತ್ರವಲ್ಲ ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲೂ ಕನಿಷ್ಟ ತಾಪಮಾನ ಕಂಡುಬಂದಿದೆ. ಅಲ್ಲದೆ ದಿನಕಳೆದಂತೆ ಬೀದರ್ ನ ವಾತಾವರಣ ಮರ್ಕ್ಯೂರಿ ಲೆವೆಲ್ಸ್ ಇಳಿಕೆ ಕಾಣುತ್ತಿದ್ದು, ಇನ್ನಷ್ಟು ದಿನಗಳ ಕಾಲ ತಾಪಮಾನ ಕುಸಿತ ಮುಂದುವರೆಯಲಿದೆ.
ಶಾಲೆಯಲ್ಲಿ ಮೊಟ್ಟೆ ನೀಡುವ ಕುರಿತು ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ
ಬೀದರ್ ಮಾತ್ರವಲ್ಲದೆ ಮಂಗಳವಾರದಂದು ವಿಜಯಪುರದಲ್ಲಿ 10.04, ಧಾರವಾಡ 10.08 ಮತ್ತು ದಾವಣಗೆರೆ 10.09 ಡಿಗ್ರಿಸೆಲ್ಸಿಯಸ್ ನಷ್ಟು ಕನಿಷ್ಟ ತಾಪಮಾನ ವರದಿಯಾಗಿದೆ. ದಾಖಲೆಯ ಪ್ರಕಾರ ಡಿಸೆಂಬರ್ 16ರಿಂದ ರಾಜ್ಯದಲ್ಲಿ ಚಳಿಗಾಲ ಶುರುವಾಗಿದ್ದು, ಇನ್ನು ನಾಲ್ಕು ವಾರಗಳ ಕಾಲ ರಾಜ್ಯದಲ್ಲಿ ಈ ಹವೆ ಮುಂದುವರೆಯಲಿದೆ. ಆ ನಂತರ ತಾಪಮಾನ ಹೆಚ್ಚಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.