ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಕುರಿತಂತೆ ಶಾಸಕ ಎಸ್.ಎ.ರಾಮದಾಸ್ ಮೈಸೂರು ಜನತೆಗೆ ಪತ್ರ ಬರೆದಿದ್ದು, ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಬಸ್ ನಿಲ್ದಾಣ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ. ಕಳೆದ 30 ವಷಗಳಿಂದ ರಾಜಕೀಯದಲ್ಲಿದ್ದೇನೆ. ಈವರೆಗೆ ಕ್ಷೇತ್ರದಲ್ಲಿ ಯಾವುದೇ ವಿವಾದ ನಡೆದಿರಲಿಲ್ಲ. ಶಾಸಕರ ನಿಧಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ 12 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ಆದರೆ ಬಸ್ ನಿಲ್ದಾಣದ ಗೋಪುರ ವಿವಾದಕ್ಕೆ ಕಾರಣವಾಗಿತ್ತು.
ಬಸ್ ನಿಲ್ದಾಣಗಳನ್ನು ಮೈಸೂರು ಅರಮನೆ ಮಾದರಿಯಲ್ಲಿ ನಿರ್ಮಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಅದೇ ಮಾದರಿಯಲ್ಲೇ ನಿರ್ಮಾಣ ಮಾಡಲಾಗಿದೆ. ಆದರೆ ಅದಕ್ಕೆ ಧರ್ಮದ ಲೇಪನ ಮಾಡಿರುವುದು ನನಗೆ ಬೇಸರ ತಂದಿದೆ. ಬಸ್ ನಿಲ್ದಾಣದ ಮೇಲಿನ ಗುಂಬಜ್ ಗಳನ್ನು ವಿವಾದಕ್ಕೆ ಒಳಪಡಿಸಲಾಗಿದೆ. ಇದೆಲ್ಲದರ ಬಗ್ಗೆ ನಾನು ಕೆಲ ಹಿರಿಯರ ಮತ್ತು ಸಲೆಹೆಗಾರರ ಜೊತೆ ನನ್ನ ಅಳಲು ತೋಡಿಕೊಂಡಿದ್ದೇನೆ. ಅವರ ಸಲಹೆ, ಸೂಚನೆಯಂತೆ ಬಸ್ ನಿಲ್ದಾಣದ ಮೇಲಿನ ಎರಡು ಗುಂಬಜ್ ಗಳನ್ನು ತೆರವುಗೊಳಿಸಿ, ನಡುವೆ ಇರುವ ಗುಂಬಜ್ ಗಳನ್ನು ಹಾಗೇ ಇರಿಸಲು ಒಪ್ಪಿಗೆ ಪಡೆಯಲಾಗಿದೆ. ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಈ ವಿಚಾರದಲ್ಲಿ ಯಾರೂ ಅನ್ಯತಾ ಭಾವಿಸಬೇಡಿ ಎಂದು ಶಾಸಕರು ತಿಳಿಸಿದ್ದಾರೆ.