ಸೋಶಿಯಲ್ ಮೀಡಿಯಾದಲ್ಲಿ ವಿಲಕ್ಷಣ ವೀಡಿಯೋ ವೈರಲ್ ಆಗುತ್ತಿರುತ್ತವೆ. ಪ್ರಾಣಿ-ಪಕ್ಷಿಗಳು, ಸರೀಸೃಪಗಳ ವಿಡಿಯೋಗಳು ಕೂಡ ಇಲ್ಲಿ ಕಂಡುಬರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋವು ವಿಭಿನ್ನ ತೆರನಾದ ಹಾವಿನದ್ದಾಗಿದೆ. ಈ ಹಾವಿನ ವಿಡಿಯೋ ನೋಡಿದ್ರೆ ಒಂದು ಕ್ಷಣ ಎದೆ ಝಲ್ಲೆನಿಸದೆ ಇರಲಾರದು.
ಹಸಿರು ಬಣ್ಣದ ರೋಮಗಳಿರುವಂತಿರುವ ವಿಚಿತ್ರ ಹಾವು ಕಂಡು ಬಂದಿದೆ. ವರದಿಗಳ ಪ್ರಕಾರ, ಥಾಯ್ಲೆಂಡ್‌ನ ಸಖೋನ್ ನಖೋನ್‌ನಲ್ಲಿನ ಜೌಗು ಪ್ರದೇಶದಲ್ಲಿ ಹಾವು ಪತ್ತೆಯಾಗಿದೆ. ವಿಚಿತ್ರ ಹಾವನ್ನು ನೋಡಿ ತಬ್ಬಿಬ್ಬಾದ ನೆಟ್ಟಿಗರು, ಈ ಜಾತಿಯನ್ನು ಗುರುತಿಸಲು ವಿಫಲವಾಗಿದ್ದಾರೆ. ಹೀಗಾಗಿ ಈ ಉರಗವನ್ನು ಏಲಿಯನ್ ಮತ್ತು ನಿಗೂಢ ಹಾವು ಎಂದು ಕರೆದಿದ್ದಾರೆ.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ಎರಡು ಅಡಿ ಉದ್ದದ ಜೀವಿಯು ಹಡಗಿನೊಳಗೆ ಚಲಿಸುತ್ತಿರುವುದನ್ನು ತೋರಿಸುತ್ತದೆ. ಹಾವಿನ ಮೈಮೇಲೆ ಹಸಿರು ಬಣ್ಣದ ಕೂದಲಿನಂತಿದ್ದು, ನೆಟ್ಟಿಗರು ಆಶ್ಚರ್ಯಚಕಿತಗೊಳಿಸಿದೆ.
ಕೆಲವು ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಇದು ಹಾವಿನ ಮೇಲಿನ ತುಪ್ಪಳವಲ್ಲ. ಆದರೆ, ಇದು ನೀರಿನ ಹಾವು ಎಂದು (ಪಾಚಿ ಹಾವು) ಎಂದು ಹೇಳಿದ್ದಾರೆ. ಇದು ನಕಲಿ ವಿಡಿಯೋ ಇದೊಂದು ಸಾಮಾನ್ಯ ಹಾವು ಎಂದು ಕೆಲವು ಬಳಕೆದಾರರು ಆರೋಪಿಸಿದ್ದಾರೆ.
https://www.youtube.com/watch?v=Ke2WV1WZxe8