
ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮೈದಾ ಇದ್ದೆ ಇರುತ್ತದೆ. ಗೋಧಿಯನ್ನು ಪರಿಷ್ಕರಿಸಿ ಅದರ ಹೊಟ್ಟು ತೆಗೆದು ಮೈದಾ ತಯಾರಿಸಲಾಗುತ್ತದೆ. ಫೈಬರ್ ಪ್ರತ್ಯೇಕಿಸಿದ ಬಳಿಕ ಅದನ್ನು ಬ್ಲೀಚ್ ಮಾಡಿ ಬಿಳಿ ಬಣ್ಣ ನೀಡಲಾಗುತ್ತದೆ.
ಇದನ್ನು ನಿತ್ಯ ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಇದು ಬಲು ನುಣ್ಣಗಿನ ಪುಡಿಯಾಗಿದ್ದು, ಹೊಟ್ಟೆಗೆ ಅಂಟಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇವು ಅನೇಕ ರೋಗಗಳಿಗೂ ಕಾರಣವಾಗಬಹುದು.
ನಿತ್ಯ ಮೈದಾ ಬಳಸುವುದು ಅನಿವಾರ್ಯವಾದರೆ ಅದರ ಬಳಕೆಯನ್ನು ಕಡಿಮೆ ಮಾಡಬಹುದು. ಸಮೋಸಾ, ತುಕುಡಿ ಮೊದಲಾದ ತಿಂಡಿಗಳನ್ನು ತಯಾರಿಸುವಾಗ ಎಣ್ಣೆಯಲ್ಲಿ ಕರಿಯುವ ಬದಲು ಏರ್ ಫ್ರೈ, ಸ್ಟೀಮ್ ಅಥವಾ ಕುದಿಸಿದರೆ ಇದರಿಂದ ಯಾವುದೇ ಉಪದ್ರವಗಳಿಲ್ಲ.
ಫ್ರೈಡ್ ಮೊಮೊಸ್ ತಯಾರಿಸುವ ಬದಲು ಸ್ಟೀಮ್ಡ್ ಮೊಮೊಗಳನ್ನು ತಯಾರಿಸಿ. ಮೈದಾ ದೋಸೆ ತಯಾರಿಸಬೇಕಾಗಿ ಬಂದಾಗ ಗೋಧಿ, ರವೆ ಅಥವಾ ಜೋಳದ ಹಿಟ್ಟನ್ನು ಸಮನಾಗಿ ಬೆರೆಸಿ.
ಕೇಕ್ ಅಥವಾ ಬಿಸ್ಕತ್ ತಯಾರಿಸುವಾಗ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ. ಸಕ್ಕರೆ ಹಾಗೂ ಮೈದಾ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದೂ ಮೈದಾ ತಿನಿಸನ್ನು ಅನಿವಾರ್ಯವಾಗಿ ತಿನ್ನಬೇಕಾಗಿ ಬಂದರೆ ಮರುದಿನ ಲೈಟ್ ಫುಡ್ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ.