ಮೈದಾ ಹಿಟ್ಟಿನಿಂದ ತಯಾರಿಸಿದ ಜಿಲೇಬಿ, ಜಹಂಗೀರ್ ಮೊದಲಾದ ತಿಂಡಿಗಳನ್ನು ತಿಂದು ಬಾಯಿ ಚಪ್ಪರಿಸುತ್ತೇವೆ. ಆದರೆ ಈ ಮೈದಾಹಿಟ್ಟು ಯಾವುದೋ ಧಾನ್ಯದಿಂದ ತಯಾರಾಗುವುದಿಲ್ಲ. ಇದನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ.
ಗೋಧಿ ಹಿಟ್ಟು ಸ್ವಲ್ಪ ದಪ್ಪವಾಗಿ ಗೋಧಿ ಬಣ್ಣದಲ್ಲಿದ್ದರೆ, ಮೈದಾಹಿಟ್ಟು ತೆಳುವಾಗಿ ಬಿಳಿ ಬಣ್ಣದಲ್ಲಿರುತ್ತದೆ.
ಮೊದಲು ಗೋಧಿಯನ್ನು ತುಸು ಹೆಚ್ಚು ಪಾಲಿಶ್ ಮಾಡಲಾಗುತ್ತದೆ. ಗೋಧಿಹಿಟ್ಟನ್ನು ಬೆಂಜಾಯಿಲ್ ಪೆರಾಕ್ಸೈಡ್ ಎಂಬ ರಾಸಾಯನಿಕದ ಸಹಾಯದಿಂದ ಬಿಳಿದಾಗಿಸಲಾಗುತ್ತದೆ.
ಗೋಧಿಯ ಹೆಚ್ಚುಗಾರಿಕೆ ಏನೆಂದರೆ ಅದರಲ್ಲಿ ನಾರು ಸತ್ವ ಅಧಿಕವಾಗಿರುತ್ತದೆ. ಆದರೆ ಗೋಧಿಯನ್ನು ಅತಿ ಪಾಲಿಶ್ ಮಾಡುವುದರಿಂದ ನಾರಿನಂಶ ನಾಶವಾಗಿ ಮತ್ತು ಅದರ ಒಳ್ಳೆ ಅಂಶಗಳು ಹೊರಟುಹೋಗುತ್ತವೆ.
ಇನ್ನು ಬಿಳಿಯಾಗಿಸಲು ಉಪಯೋಗಿಸುವ ರಾಸಾಯನಿಕದಿಂದ ಸಕ್ಕರೆ ಕಾಯಿಲೆ, ಮಲಬದ್ಧತೆ, ಅಜೀರ್ಣ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಮೈದಾಹಿಟ್ಟು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗುತ್ತೆ. ಇದನ್ನು ಬಿಳಿ ವಿಷವೆಂದು ವರ್ಣಿಸಲಾಗುತ್ತದೆ.
ಮೈದಾಹಿಟ್ಟಿನಲ್ಲಿ ಜಿಗುಟು ಹೆಚ್ಚಾಗಿ ಇರುವುದರಿಂದ ಸಿನಿಮಾ ಪೋಸ್ಟರ್, ಕಾಗದ ಅಂಟಿಸಲು ಬಳಸಲಾಗುತ್ತದೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿದರೆ ಒಳಿತು.