ಮೈಗ್ರೇನ್ ಸಮಸ್ಯೆ ದೀರ್ಘ ಕಾಲದ ತನಕ ಬೆಂಬಿಡದೆ ಕಾಡುತ್ತದೆ. ಕೆಲವೊಮ್ಮೆ ಇದಕ್ಕೆ ಶಾಶ್ವತ ಪರಿಹಾರಗಳನ್ನು ಒದಗಿಸುವುದು ಕಷ್ಟವಾದರೂ ಈ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಇದರ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ನಮ್ಮ ದೇಹದ ಆಕ್ಯುಪ್ರೆಶರ್ ಪಾಯಿಂಟ್ ಗಳ ಬಗ್ಗೆ ತಿಳಿಯಿರಿ. ತಲೆನೋವನ್ನು ಕಡಿಮೆ ಮಾಡುವ ಪಾಯಿಂಟ್ ಗಳ ಬಗ್ಗೆ ತಿಳಿಯಿರಿ. ಆ ಭಾಗವನ್ನು ಒತ್ತಿ ಹಿಡಿಯಿರಿ.
ಲ್ಯಾವೆಂಡರ್ ಎಸೆನ್ಸಿಯಲ್ ಆಯಿಲ್ ಅನ್ನುಮೂಗು ಮತ್ತು ಬಾಯಿಯ ಹತ್ತಿರ ಇಟ್ಟುಕೊಂಡು ಇದರ ವಾಸನೆ ತೆಗೆದುಕೊಳ್ಳಿ. ಹಣೆಯ ಅಕ್ಕಪಕ್ಕದಲ್ಲಿ ಒಂದೆರಡು ಹನಿ ಬಿಟ್ಟುಕೊಂಡು ಮಸಾಜ್ ಮಾಡಿ. ಅಲರ್ಜಿ ಸಮಸ್ಯೆ ಇರುವವರು ಇದರಿಂದ ದೂರವಿರುವುದು ಒಳ್ಳೆಯದು.
ಐಸ್ ಪ್ಯಾಕ್ ಅನ್ನು ತಲೆಯ ಮೇಲೆ ಇಟ್ಟುಕೊಂಡು ಇಪ್ಪತ್ತರಿಂದ ಮೂವತ್ತು ನಿಮಿಷ ಮಸಾಜ್ ಮಾಡಿ. ಯೋಗ ವ್ಯಾಯಾಮಗಳನ್ನು ಮಾಡುವ ಮೂಲಕವೂ ಮೈಗ್ರೇನ್ ಸಮಸ್ಯೆಯಿಂದ ಸ್ವಲ್ಪ ಮಟ್ಟಿನ ಮುಕ್ತಿ ಹೊಂದಬಹುದು.