ಮೈಗ್ರೇನ್ ಬೇಡವೆಂದರೂ ಬಂದು ಕಾಡುವ ಅತಿಥಿ. ಬಿಡದೆ ಕಾಡುವ ತಲೆ ನೋವಿನಿಂದ ಮುಕ್ತಿ ಕಾಣದೆ ಹಲವರು ಹೈ ಡೋಸೇಜ್ ಮಾತ್ರೆಗಳ ಮೊರೆ ಹೋಗುವುದೂ ಉಂಟು. ಅದರ ಬದಲು ಮೈಗ್ರೇನ್ ಬರದಂತೆ ತಡೆಯಲು ಏನು ಮಾಡಬಹುದು ನೋಡೋಣ.
ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದು ಬರದಂತೆ ಮಾಡಬಹುದು. ಮೈಗ್ರೇನ್ ಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದು. ಅದನ್ನು ತಡೆಯಲು ಕಲ್ಲಂಗಡಿ ಹಣ್ಣು, ಮುಳ್ಳು ಸೌತೆಕಾಯಿ ದಿನನಿತ್ಯ ಸೇವಿಸಬೇಕು. ಆಪಲ್ ಕೂಡ ಈ ನಿಟ್ಟಿನಲ್ಲಿ ಪ್ರಯೋಜನಕಾರಿ.
ಅಧಿಕ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಿದಾಗ ನೋವು ಉಂಟು ಮಾಡುವ ಆಮ್ಲಗಳನ್ನು ನಿಯಂತ್ರಿಸಬಹುದು. ತಲೆ ನೋವಿನೊಂದಿಗೆ ಕಾಡುವ ವಾಕರಿಕೆಯನ್ನು ನಿವಾರಿಸುವ ಶಕ್ತಿ ಶುಂಠಿಗಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಶುಂಠಿಯನ್ನು ಬಳಸಿ. ವಿಟಮಿನ್ ಗಳು ಹೇರಳವಾಗಿರುವ ಬಾದಾಮಿ, ರಾಗಿ, ಬಾಳೆಹಣ್ಣು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆಯಿಂದ ದೂರವಿರಬಹುದು.