alex Certify ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಕರಿಮೆಣಸು ಬೆಸ್ಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಕರಿಮೆಣಸು ಬೆಸ್ಟ್‌

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ.

ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ ಒಂದು ಭಾಗದಲ್ಲಿ ಅತಿಯಾದ ನೋವು ಈ ಮೈಗ್ರೇನ್‌ ನಿಂದಾಗುತ್ತದೆ.

ಮೈಗ್ರೇನ್‌ ನನ್ನು ಪೇನ್‌ ಕಿಲ್ಲರ್‌ ಅಥವಾ ತಲೆನೋವಿನ ಮಾತ್ರೆಗಳಿಂದ ನಿವಾರಿಸುವುದು ಕಷ್ಟಕರ. ಇದಕ್ಕೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಾಗುತ್ತದೆ.

ಆದರೆ ವೈದ್ಯರ ಸಲಹೆ, ಔಷಧಿಗಳ ಜೊತೆಗೆ ಕೆಲ ಮನೆ ಮದ್ದು ಮೈಗ್ರೇನ್‌ ನಿಂದ ದೂರವಾಗಲು ಸಹಕಾರಿಯಾಗುತ್ತದೆ. ಅದರಲ್ಲಿ ಪ್ರಮುಖವಾಗಿರುವುದೆಂದರೆ, ಕರಿಮೆಣಸು. ಕರಿಮೆಣಸನ್ನು ಸರಿಯಾಗಿ ಬಳಕೆ ಮಾಡುವುದರಿಂದ ಮೈಗ್ರೇನ್‌ ನಿಯಂತ್ರಿಸಲು ಸಾಧ್ಯವಿದೆ. ಮನೆಯಲ್ಲಿ ಮಾಡುವ ವಿವಿಧ ಬಗೆಯ ಅಡುಗೆಯಲ್ಲಿ ಕರಿಮೆಣಸು ಬಳಸುವ ಅಭ್ಯಾಸ ಕರಗತ ಮಾಡಿಕೊಳ್ಳಿ. ವಿಟಮಿನ್‌ ಹಾಗೂ ಖನಿಜಾಂಶಗಳಿಂದ ಕೂಡಿರುವ ಕರಿಮೆಣಸುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.

ಕರಿಮೆಣಸಿನ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಕುಡಿಯುವುದು ಅಥವಾ ತುಪ್ಪದಲ್ಲಿ ಬಿಸಿ ಮಾಡಿ ತೆಗೆದುಕೊಳ್ಳುವುದು ಮೈಗ್ರೇನ್‌ ಅಥವಾ ಇನ್ನಿತರ ತಲೆನೋವಿನ ಬಾಧೆಯನ್ನು ಹೋಗಲಾಡಿಸುತ್ತದೆ. ಕರಿಮೆಣಸಿನಲ್ಲಿರುವ ಖಾರದ ಅಂಶ ನೋವಿನ ಬಾಧೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಅಥವಾ ನೆನೆಸಿಟ್ಟ ಕರಿಮೆಣಸನ್ನು ಹುಡಿ ಮಾಡಿಯೂ ಸೇವಿಸಬಹುದು.

ವಿಟಮಿನ್‌ ಎ, ಸಿ ಹಾಗೂ ಕೆ ಗಳನ್ನು ಹೊಂದಿರುವ ಕರಿಮೆಣಸಿನ ಕಾಳುಗಳಲ್ಲಿ, ಅತ್ಯಧಿಕ ಪ್ರಮಾಣದ ಖನಿಜಾಂಶಗಳೂ ಇವೆ. ಕ್ಯಾಲ್ಸಿಯಂ, ಪೋಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಇವುಗಳು ಹೊಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...