ಅಂಧ ಪದವೀಧರರೊಬ್ಬರು ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ವಾರ್ಷಿಕ 47 ಲಕ್ಷ ರೂಪಾಯಿ ವೇತನದ ಉದ್ಯೋಗ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ವಾಸಿ ಬಿ ಟೆಕ್ ಪದವೀಧರ 25 ವರ್ಷದ ಯಶ್ ಸೋನಾಕಿಯ ಉದ್ಯೋಗ ಪಡೆದವರಾಗಿದ್ದಾರೆ.
ಇಂದೋರ್ ನ ಶ್ರೀ ಗೋವಿಂದರಾಮ್ ಸಕ್ಸರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಲ್ಲಿ 2021 ರಲ್ಲಿ ಬಿ ಟೆಕ್ ಪದವಿ ಪಡೆದುಕೊಂಡಿರುವ ಇವರು ಬಾಲ್ಯದಿಂದಲೇ ಸಾಫ್ಟ್ವೇರ್ ಇಂಜಿನಿಯರ್ ಆಗುವ ಕನಸು ಕಂಡಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.
ಗ್ಲುಕೋಮಾದಿಂದ ತಮ್ಮ ಎಂಟನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಯಶ್ ಸ್ಕ್ರೀನ್ ರೀಡರ್ ತಂತ್ರಾಂಶದ ಮೂಲಕ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಮೈಕ್ರೋಸಾಫ್ಟ್ ಉದ್ಯೋಗ ಪ್ರಸ್ತಾವವನ್ನು ಸ್ವೀಕರಿಸಿರುವ ಅವರು ಶೀಘ್ರದಲ್ಲೇ ಬೆಂಗಳೂರಿನ ಕಚೇರಿಗೆ ಹಾಜರಾಗಲಿದ್ದಾರೆ. ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಲಾಗುತ್ತದೆ.