ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು.
ಆದ್ರೆ ಮೈಕ್ರೋವೇವ್ ನಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಪ್ಲಾಸ್ಟಿಕ್ ಬೌಲ್ ಗಳಲ್ಲಿಟ್ಟು ನಾವು ಮೈಕ್ರೋವೇವ್ ನಲ್ಲಿ ತಿನಿಸುಗಳನ್ನು ಬಿಸಿ ಮಾಡ್ತೇವೆ. ಆಗ ಆ ಪ್ಲಾಸ್ಟಿಕ್ ನಿಂದ ಕೆಲ ಕ್ಯಾನ್ಸರ್ ಕಾರಕ ಜೀವಾಣುಗಳು ಆಹಾರ ಸೇರಿಕೊಳ್ಳುತ್ತವೆ.
ಅದನ್ನು ಸೇವಿಸಿದಾಗ ಕ್ಯಾನ್ಸರ್ ಕಾರಕ ಜೀವಾಣು ನಮ್ಮ ದೇಹ ಸೇರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೂ ಅದು ಒತ್ತಡ ಹೇರುತ್ತದೆ. ಇದರಿಂದ ಫಲವತ್ತತೆ, ಹಾರ್ಮೋನ್ ಸಮತೋಲನ, ರಕ್ತದೊತ್ತಡ, ಹೃದಯದ ಆರೋಗ್ಯ, ನಮ್ಮ ಮನಃಸ್ಥಿತಿ ಎಲ್ಲದರ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಮೈಕ್ರೋವೇವ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಹೆಲ್ತಿಯಾಗಿರಿ.