ಹೊಸ ವರ್ಷಕ್ಕೆ ಕೆಲ ದಿನಗಳು ಬಾಕಿ ಇರುವಾಗಲೆ ರಾಜಧಾನಿಯಲ್ಲಿ ಡ್ರಗ್ಸ್ ಹಾವಳಿ ಶುರುವಾಗಿದೆ. ಎಂದಿಗಿಂತ ಈ ವೇಳೆ ಡ್ರಗ್ಸ್ ಜಾಲ ಆಕ್ಟೀವ್ ಆಗಿರತ್ತೆ ಎಂದು ಲೆಕ್ಕಾಚಾರ ಹಾಕಿದ ಮೈಕೋ ಲೇಔಟ್ ಪೊಲೀಸರು ಬರೋಬ್ಬರಿ ಐದು ಕೋಟಿ ಮೌಲ್ಯದ ಹ್ಯಾಶಿಷ್ ಆಯಿಲ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಹೊಸ ವರ್ಷ ಬರ್ತಿರೋದ್ರಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದೆವು. ಕಳೆದ ನಾಲ್ಕು ದಿನದ ಹಿಂದೆ ಜೆಪಿ ನಗರದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಆರೋಪಿಯನ್ನ ಕರೆತಂದು ವಿಚಾರಣೆ ನಡೆಸಲಾಯ್ತು. ಈ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಪೆಡ್ಲರ್ ಗಳ ಹುಡುಕಾಟಕ್ಕೆ ಜಾಲ ಬೀಸಿದ್ದೆವು.
ಮೈ ಕೊರೆಯುವ ಚಳಿಗೆ ತತ್ತರಿಸಿದ ಜನ: 85 ವರ್ಷದಲ್ಲೆ ಕನಿಷ್ಟ ತಾಪಮಾನ ಕಂಡ ಬೀದರ್..!
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರಮುಖ ಡ್ರಗ್ಸ್ ಪೆಡ್ಲರ್ ಗಳಿರುವ ಮಾಹಿತಿ ತಿಳಿದುಬಂದಿತ್ತು. ಮಾಹಿತಿ ಅನುಸರಿಸಿ ಮೈಕೋ ಲೇಔಟ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸಿ ಬೆಂಗಳೂರಿಗೆ ಕರೆತಂದು, ವಿಚಾರಿಸಿದಾಗ ಸಾಫ್ಟ್ ವೇರ್ ಹಾಗೂ ಐಟಿ ಕೆಲಸಗಾರರು, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಹ್ಯಾಶಿಷ್ ಆಯಿಲ್ ತರಲಾಗ್ತಿತ್ತು ಎಂಬ ಮಾಹಿತಿ ಹೊರಬಂದಿದೆ. ಇನ್ನು ಆರೋಪಿಗಳ ಬಳಿಯಿದ್ದ ಐದು ಕೋಟಿ ಬೆಲೆ ಬಾಳುವ ಐದು ಕೆ.ಜಿ ಹ್ಯಾಶಿಷ್ ಆಯಿಲ್, ನಲವತ್ತು ಸಾವಿರ ಮೌಲ್ಯದ ಒಂದೂವರೆ ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.