ಮೈಕಾಂತಿ ಹೆಚ್ಚಿಸಲು ಮತ್ತು ದಿನವಿಡಿ ತಾಜಾ ಅಗಿರಲು ನೀವು ಸ್ನಾನ ಮಾಡುವ ನೀರಿಗೆ ಈ ಕೆಲವು ವಸ್ತುಗಳನ್ನು ಹಾಕಿನೋಡಿ.
ಸ್ನಾನ ಮಾಡುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ತ್ವಚೆಯ ತುರಿಕೆ, ಸನ್ ಬರ್ನ್, ಉಳುಕು, ಮಾನಸಿಕ ಒತ್ತಡ ಸೇರಿದಂತೆ ಹಲವು ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ರಕ್ತದ ಪರಿಚಲನೆಯನ್ನು ಇದು ಸರಾಗವಾಗಿಸುತ್ತದೆ. ಸೋರಿಯಾಸೀಸ್ ಸಮಸ್ಯೆಗೂ ಉಪ್ಪೇ ರಾಮಬಾಣ.
ಸ್ನಾನದ ಬೆಚ್ಚಗಿನ ನೀರಿಗೆ ವಿನೇಗರ್ ಸೇರಿಸುವುದರಿಂದ ಬೆನ್ನು ನೋವು, ಮಂಡಿ ನೋವು ಮತ್ತು ಮಣಿಕಟ್ಟಿನ ನೋವು ನಿವಾರಣೆ ಆಗುತ್ತದೆ. ಇದು ಮೊಡವೆ ಮೂಡದಂತೆ ತಡೆಯುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ.
ಜೇನನ್ನು ನೀರಿಗೆ ಬೆರೆಸಿ ಸ್ನಾನ ಮಾಡಿದರೆ ತ್ವಚೆ ಮೃದುವಾಗುತ್ತದೆ. ತೇವಾಂಶವನ್ನು ಕಾಪಿಡಲು ಇದು ಉಪಕಾರಿ. ಇದು ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ. ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಇದು ನೈಸರ್ಗಿಕ ಮಾಯಿಸ್ಚರೈಸರ್ ಆಗಿದೆ. ಚರ್ಮದ ಶುಷ್ಕತೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ.